Advertisement

ಆರೋಗ್ಯವಂತ ಸಮಾಜ ನಿರ್ಮಿಸಿ

02:36 PM Feb 22, 2021 | Team Udayavani |

ಚಿಕ್ಕಬಳ್ಳಾಪುರ: ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ನಗರಸಭೆ ಅಧ್ಯಕ್ಷ ಡಿ.ಎಸ್‌. ಆನಂದರೆಡ್ಡಿ(ಬಾಬು) ಹೇಳಿದರು.

Advertisement

ನಗರಸಭೆ ಆವರಣದಲ್ಲಿ ಭಾರತ ವೈದ್ಯಕೀಯ ಸಂಘದಿಂದ ನಗರಸಭೆ ಸದಸ್ಯರು-ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ಚಿಕ್ಕಬಳ್ಳಾಪುರ ನಗರದ ಸೌಂದರ್ಯ ಕಾಪಾಡುವ ಪೌರ ಕಾರ್ಮಿಕರು ಮೊದಲು ತಮ್ಮ ಆರೋಗ್ಯವನ್ನು  ಭದ್ರ ಮಾಡಿಕೊಳ್ಳಬೇಕು. ಕಾರ್ಯಒತ್ತಡದಲ್ಲಿ ಆರೋಗ್ಯ ನಿರ್ಲಕ್ಷ್ಯ ಮಾಡಬಾರದು ಎಂದರು.

ಮನುಷ್ಯನ ಬದಲಾಗುತ್ತಿರುವ ಜೀವನ ಶೈಲಿ ಮತ್ತು ಸೇವಿಸುತ್ತಿರುವ ಆಹಾರದಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವಿಸಿ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ನಡೆಸುವ ಆರೋಗ್ಯ ಶಿಬಿರ ಸದುಪಯೋಗ ಮಾಡಿಕೊಂಡು ಆರೋಗ್ಯವಾಗಿರಬೇಕೆಂದರು.

ಇದೇ ವೇಳೆಯಲ್ಲಿ 110 ಜನರಿಗೆ ಆರೋಗ್ಯ ತಪಾಸಣೆ ಮಾಡಿ ಅದರಲ್ಲಿ 10 ಜನರಲ್ಲಿ ಮಧುಮೇಹಕಂಡುಬಂದಿದೆ. ಬಿಪಿ ಇರುವ 6 ಮಂದಿಪತ್ತೆಯಾಗಿದ್ದಾರೆ. ಆರೋಗ್ಯ ಸಮಸ್ಯೆಗಳ ಕುರಿತುತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು.ಭಾರತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯಅಧ್ಯಕ್ಷ ಡಾ.ಪ್ರಶಾಂತಮೂರ್ತಿ, ಕಾರ್ಯದರ್ಶಿ ಎಚ್‌.ಎಸ್‌.ಮಧುವನ್‌, ನಗರಸಭೆ ಸದಸ್ಯರಾದ ಯತೀಶ್‌,ಮಿಲ್ಟನ್‌ ವೆಂಕಟೇಶ್‌, ಪೌರಾಯುಕ್ತ ಡಿ.ಲೋಹಿತ್‌,ಡಾ.ರಾಮಚಂದ್ರ, ಡಾ.ವಿಜಯ, ಡಾ.ಐಎಸ್‌ಎನ್‌ರಾವ್‌, ಡಾ.ಸಿದ್ದಲಿಂಗಪ್ಪ, ಡಾ.ಅನಂತು, ಡಾ.ರಜನಿ, ಡಾ.ಸುಷ್ಮಾ, ಡಾ.ಅಮೃತರಾಜ್‌, ಡಾ.ದೀಪ್ತಿ,ಡಾ.ಮಹೇಶ್‌, ಡಾ.ಶರಣ್‌, ಡಾ.ಅನಿತಾ ಮತ್ತಿತರರು ಉಪಸ್ಥಿತರಿದ್ದರು.

ಶಿಡ್ಲಘಟ್ಟ ತಾಲೂಕಿಗೆ ಎಚ್‌.ಎನ್‌.ವ್ಯಾಲಿ ನೀರು :

Advertisement

ಶಿಡ್ಲಘಟ್ಟ: ಎಚ್‌.ಎನ್‌.ವ್ಯಾಲಿ ಯೋಜನೆಯಡಿ ತಾಂತ್ರಿಕ ಸಮಸ್ಯೆಯಿಂದ ನೀರು ಹರಿಯಲುವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ತಾಲೂಕಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡೀಸಿ ಆರ್‌.ಲತಾ ತಿಳಿಸಿದರು.

ತಾಲೂಕಿನ ಆನೂರು ಗ್ರಾಪಂನ ಬೋದಗೂರುಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ ಅಂಗವಾಗಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್‌.ಎನ್‌.ವ್ಯಾಲಿ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ ತಾಲೂಕಿಗೆ ನೀರು ಹರಿದು ಬಂದಿದೆ.ತಾಂತ್ರಿಕ ಸಮಸ್ಯೆಯಿಂದ ಶಿಡ್ಲಘಟ್ಟ ತಾಲೂಕಿಗೆನೀರು ಹರಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಆರ್ಥಿಕವಾಗಿ ಅಭಿವೃದ್ಧಿ: ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿ ಹಿತದೃಷ್ಟಿಯಿಂದ ಸರ್ಕಾರ ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ ಎಂಬ ಕಾರ್ಯಕ್ರಮದ ಮೂಲಕ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕಲ್ಪಿಸುತ್ತಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದರು.

ಟ್ರ್ಯಾಕ್ಟರ್‌ ರ್ಯಾಲಿ ಎಚ್ಚರಿಕೆ: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ಎಚ್‌.ಎನ್‌. ವ್ಯಾಲಿ ಯೋಜನೆ ಮೂಲಕ ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ 15 ಕೆರೆಗಳಿಗೆ ನೀರು ಹರಿದುಬಂದಿದೆ. ಆದರೆ ಶಿಡ್ಲಘಟ್ಟ ತಾಲೂಕಿಗೆ ನೀರು ಹರಿಸಲು ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ನೀರು ಹರಿಸದಿದ್ದಲ್ಲಿ ಬೆಂಗಳೂರು ಬದಲಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲಾಗುವುದುಎಂದು ಎಚ್ಚರಿಕೆ ನೀಡಿದರು.

ಜಿಪಂ ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್‌ ಮುನಿಯಪ್ಪ, ಶಿಡ್ಲಘಟ್ಟ ತಹಶೀಲ್ದಾರ್‌ ಬಿ.ಎಸ್‌. ರಾಜೀವ್‌, ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ವಿಜೇಂದ್ರ, ಪಿಡಿಒ ಕಾತ್ಯಾಯಿನಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next