Advertisement

ಕಾರ್ಗಲ್‌ ಪಪಂ ಆಯವ್ಯಯ ಮಂಡನೆ

09:11 PM Mar 31, 2021 | Girisha |

ಸಾಗರ: ತಾಲೂಕಿನ ಜೋಗ- ಕಾರ್ಗಲ್‌ ಪಪಂನ 2021-22ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ಕೆ.ಎನ್‌. ವಾಸಂತಿ ರಮೇಶ್‌ ಮಂಗಳವಾರ ಮಂಡಿಸಿದರು. ಚೊಚ್ಚಲ ಬಜೆಟ್‌ ಮಂಡಿಸಿದ ಮಾತನಾಡಿದ ಅವರು, ಪಪಂಗೆ ಉನ್ನತೀಕರಣಗೊಂಡು 20 ವರ್ಷಗಳು ಸಂದಿವೆ. ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸಂಪನ್ಮೂಲ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

Advertisement

ಸ್ವೀಕೃತವಾಗುವ ಒಟ್ಟು ಆದಾಯ 1961.02 ಲಕ್ಷ ರೂ.ನಲ್ಲಿ 1926.47 ಲಕ್ಷ ರೂ. ವ್ಯಯಿಸಲಾಗುತ್ತಿದೆ ಎಂದರು. ವಿರೋಧ ಪಕ್ಷದ ನಾಯಕ ರಾಜು ಮಾತನಾಡಿ, ಅಧ್ಯಕ್ಷರು ಮಂಡಿಸಿದ ಬಜೆಟ್‌ನಲ್ಲಿ ದೂರದೃಷ್ಟಿ ಇಲ್ಲ. ಸಂಪನ್ಮೂಲದ ಕ್ರೋಢೀಕರಣದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದರು.

ಸದಸ್ಯ ವಾಟೇಮಕ್ಕಿ ನಾಗರಾಜ್‌ ಮಾತನಾಡಿ, ಹಿಂದಿನ ಆಡಳಿತದ ನ್ಯೂನತೆಗಳನ್ನು ಸರಿಪಡಿಸಲು ಈ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಶಾಸಕ ಎಚ್‌. ಹಾಲಪ್ಪ ಅವರ ಮಾರ್ಗದರ್ಶನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಅನುದಾನದ ಭರವಸೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next