Advertisement

ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ತಗ್ಗುವ ನಿರೀಕ್ಷೆ

07:23 PM Jan 14, 2023 | Team Udayavani |

ನವದೆಹಲಿ: ಮುಂದಿನ ತಿಂಗಳು ಮಂಡನೆಯಾಗುವ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ತಗ್ಗಿಸುವ ನಿರೀಕ್ಷೆಯಿದೆ.

Advertisement

ದೇಶ ಕೊರೊನಾ ಪರಿಸ್ಥಿತಿ ಎದುರಿಸಿದ ನಂತರ ಆರೋಗ್ಯ ಮತ್ತು ಜೀವ ವಿಮೆ ಮಾಡಿಸುತ್ತಿರುವವರ ಸಂಖ್ಯೆ ಕೂಡ ಅಧಿಕವಾಗಿದೆ. ಜಂಜಾಟದ ಬದುಕಿನದಲ್ಲಿ ವೈಯಕ್ತಿಕ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳು ಹಾಗೂ ಮರಣದ ನಂತರ ಕುಟುಂಬದ ಆರ್ಥಿಕ ನೆರವಿಗಾಗಿ ಜನಸಂಖ್ಯೆಯ ಹೆಚ್ಚಿನ ಭಾಗ ಆರೋಗ್ಯ ಮತ್ತು ಜೀವ ವಿಮೆಗೆ ಮೊರೆ ಹೋಗುತ್ತಿದ್ದಾರೆ.

ಪ್ರಸ್ತುತ ಆರೋಗ್ಯ ವಿಮೆಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ಇದೆ. ಇದರಿಂದ ಪ್ರೀಮಿಯಂ ಹೆಚ್ಚಲಿದೆ. ಪ್ರೀಮಿಯಂ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ತಗ್ಗಿಸಬೇಕು ಎಂಬ ಬೇಡಿಕೆ ಈಗಾಗಲೇ ವ್ಯಕ್ತವಾಗುತ್ತಿದೆ. ವಿಮೆ ಇದ್ದರೆ, ಆದಾಯ ತೆರಿಗೆಯಲ್ಲಿ ಕೂಡ ಕೊಂಚ ವಿನಾಯಿತಿ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next