ಯಳಂದೂರು: ಮುಂದೆ ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷವು ನಮಗೆ ಎದುರಾಳಿಯಲ್ಲ ಬಿಜೆಪಿ ಪಕ್ಷವುವೇ ನಮಗೆ ನೇರ ಎದುರಾಳಿ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಪಟ್ಟಣ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲುವ ವಿಶ್ವಾಸವಿದೆ. ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿಯುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಅಭ್ಯರ್ಥಿ ಪರ ದುಡಿಯಿರಿ: ಪಕ್ಷದಿಂದ ಎಲ್ಲಾತರಹ ಸಹಕಾರವನ್ನು ಪಡೆದು ಪಕ್ಷಕ್ಕೆ ದ್ರೋಹ ಮಾಡಿರುವ ಉದಾರಣೆಗಳು ಇದೆ. ಇಂತಹ ಕೀಳು ಮಟ್ಟದ ರಾಜಕೀಯ ನಿಲ್ಲಬೇಕು, ಪಕ್ಷ ತಂದೆ ತಾಯಿ ಇದ್ದಾಗೆ ಪಕ್ಷಕ್ಕೆ ದ್ರೋಹ ಮಾಡಿದರೆ ತಂದೆ ತಾಯಿಗೆ ದ್ರೋಹ ಮಾಡಿದಾಗೆ ಹಾಗುತ್ತದೆ. ಎಲ್ಲಾ ಕಾರ್ಯಕರ್ತರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತಗೆದುಕೊಂಡು ಒಗ್ಗಟ್ಟಿನಿಂದ ಪಕ್ಷ ಅಭ್ಯರ್ಥಿಗಳ ಪರ ದುಡಿಯಬೇಕು ಎಂದು ಸಲಹೆ ನೀಡಿದರು.
ಜನಾಭಿಪ್ರಾಯ ಸಂಗ್ರಹ: ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಟ್ಟಣ 11 ವಾರ್ಡ್‌ಗಳಲ್ಲಿ ಜನಾಭಿಪ್ರಾಯಗಳನ್ನು ಪಡೆದುಕೊಂಡು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು, ಜನರ ನಡುವೆ ಉತ್ತಮ ಕೆಲಸಗಳನ್ನು ಸಾರ್ವಜನಿಕರ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್‌ನ್ನು ನೀಡಲಾಗವುದು. ಅವಕಾಶ ವಂಚಿತ ಸಮುದಾಯಗಳನ್ನು ಪರಿಗಣಿಸಿ ಅಧಿಕಾರ ಸಿಗುವಂತೆ ಗಮನ ಹರಿಸಲಾಗುವುದು ಎಂದರು.
ಅಧಿಕಾರ ಪಡೆಯುವ ವಿಶ್ವಾವಿದೆ: ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕಡೇ ಚುನಾವಣೆಯು ದಿನಾಂಕ ನಿಗದಿಯಾಗಿದೆ. ಪಟ್ಟಣ ಪಂಚಾಯಿತಿಗಳಾದ, ಯಳಂದೂರು, ಹನೂರು ಹಾಗೂ ಪುರಸಭೆ ಬನ್ನೂರು, ಗುಂಡ್ಲುಪೇಟೆ ಹಾಗೂ ನಗರಸಭೆಯಾದ ನಂಜನಗೂಡು ಕ್ಷೇತ್ರ 5 ನಗರ ಪ್ರದೇಶಗಳಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಈ ಬಾರಿಯ ಸ್ಥಳೀಯ ಸಂಸ್ಥೆಯಲ್ಲಿ ಹೆಚ್ಚಿನ ಅಧಿಕಾರಿವನ್ನು ಪಡೆಯವು ವಿಶ್ವಾಸವಿದೆ ಎಂದು ಹೇಳಿದರು.
ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಬಾಲರಾಜು, ಜಿಲ್ಲಾಧ್ಯಕ್ಷ ಮರಿಸ್ವಾಮಿ, ಚುನಾವಣೆ ಉಸ್ತುವಾರಿ ಬಸವರಾಜು, ವಡಗೆರೆ ದಾಸ, ಕೊಪ್ಪಾಳಿ ಮಹದೇವನಾಯಕ, ಶಿವಕುಮಾರ್, ಆರ್.ಮಹದೇವ್, ಕೊಳ್ಳೇಗಾಲ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ತಾಪಂ ಅಧ್ಯಕ್ಷ ನಿರಂಜನ್, ಕಾಂಗ್ರೆಸ್ ಪಕ್ಷ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಪ್ರಭುಪ್ರಸಾದ್, ಸೇರಿದಂತೆ ಟಿಕೆಟ್ ಅಕಾಂಕ್ಷಿಗಳು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.