Advertisement

ಇವಿಎಂ ಮತಯಂತ್ರ ನಿಷೇಧಕ್ಕೆ ಬಿಎಸ್‌ಪಿ ಆಗ್ರಹ

05:41 AM Jan 26, 2019 | Team Udayavani |

ದೇವನಹಳ್ಳಿ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚುನಾವಣೆಯಲ್ಲಿ ಇವಿಎಂ ಮತಯಂತ್ರವನ್ನು ನಿಷೇಧಿಸಿ ಬ್ಯಾಲೆಟ್ ಪೇಪರ್‌ ಪದ್ಧತಿ ಜಾರಿಗೆ ಒತ್ತಾಯಿಸಿ ಬಿಎಸ್‌ಪಿ ಜಿಲ್ಲಾ ಮತ್ತು ತಾಲೂಕು ಕಾರ್ಯಕರ್ತರು ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಪ್ರತಿಭಟನೆ ನಡೆಸಿದರು.

Advertisement

ಮತ ಯಂತ್ರಗಳಿಂದ ಹೆಚ್ಚು ಅಕ್ರಮ ನಡೆ ಯುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ಕೃತ್ಯವನ್ನು ತಮ್ಮ ಅಧಿಕಾರದ ಆಸೆಗಾಗಿ ಮಾಡುತ್ತಾರೆ ಎಂದರೆ ಇದಕ್ಕಿಂತ ರಾಷ್ಟ್ರದ್ರೋಹ ಬೇರೊಂದಿಲ್ಲ. ಅದಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಯಂತ್ರದ ಬದಲಿಗೆ ಬ್ಯಾಲೆಟ್ ಪೇಪರ್‌ನಲ್ಲಿ ಮತ ದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.

ಇವಿಎಂ ಯಂತ್ರದ ಮೇಲೆ ಅನುಮಾನ: ರಾಜ್ಯ ಬಿಎಸ್‌ಪಿ ಕಾರ್ಯ ದರ್ಶಿ ನಂದಿಗುಂದ ವೆಂಕಟೇಶ್‌ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಭಾರತೀಯರು ಆಶ್ಚರ್ಯ ಹಾಗೂ ಅನುಮಾನದಿಂದಲೇ ಒಪ್ಪಿ ಕೊಂಡರು. 2014 ರ ಲೋಕಸಭಾ ಚುನಾವಣೆ ಮುಗಿದ ಮೇಲೆ ನಡೆದ ಬೇರೆ ಬೇರೆ ರಾಜ್ಯಗಳ ಚುನಾವಣಾ ಫ‌ಲಿತಾಂಶ ಮಾತ್ರ ಭಾರತೀಯರೆಲ್ಲರನ್ನೂ ದಿಗ್ಭ್ರಾಂತಗೊಳಿಸಿದೆ. 2014 ರ ಚುನಾವಣೆ ಮೇಲಿನ ಅನುಮಾನ ಖಾತ್ರಿಗೊಳಿಸಿ, ತಾತು ನೀಡುವ ಮತದಾನದ ಮತಯಂತ್ರಗಳ ಮೇಲಿನ ಅನುಮಾನ ತೀವ್ರಗೊಂಡಿವೆ ಎಂದರು.

ಯಂತ್ರಗಳ ಹ್ಯಾಕ್‌ ಸಾಧ್ಯತೆ: 2017ರಲ್ಲಿ ನಡೆದ ಉತ್ತರ ಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆ ಮಾತ್ರ ಮತಯಂತ್ರ ದಿಂದಲೇ ನಡೆದು ಬಿಜೆಪಿ ಗೆಲ್ಲುತ್ತದೆ ಎಂಬುದನ್ನು ಸಾಬೀತು ಪಡಿಸಿತು. ಇದಕ್ಕೆ ಪೂರಕವಾಗಿ ಅಮೆರಿಕಾ ದಲ್ಲಿ ಸೈಬರ್‌ ಪರಿಣಿತ ಸಯ್ಯದ್‌ ಶುಖಾ ಅವರು ಲಂಡನ್‌ನಲ್ಲಿ ಎಲೆಕ್‌ಟ್ರಾನಿಕ್‌ ವೋಟಿಂಗ್‌ ಯಂತ್ರಗಳನ್ನು ಹ್ಯಾಕ್‌ ಮಾಡಬಹುದು. 2014ರ ಲೋಕಸಭಾ ಚುನಾ ವಣೆ ಯಲ್ಲಿ ಬಿಜೆಪಿ ಪರವಾಗಿ ಮತಯಂತ್ರದಿಂದ ಹ್ಯಾಕ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದರು.

ರಾಜ್ಯಾದ‌್ಯಂತ ಮತದಾರರ ದಿನಾಚರಣೆಯಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇವಿಎಂ ಮತ ಯಂತ್ರ ನಿಷೇಧಿಸಿ, ಬ್ಯಾಲೆಟ್ ಪೇಪರ್‌ ಪದ್ಧತಿ ಜಾರಿಗೆ ಆಗ್ರಹಿಸಿ ಬೃಹತ್‌ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬಿಎಸ್‌ಪಿ ಜಿಲ್ಲಾಧ್ಯಕ್ಷ ಮುನಿಕೃಷ್ಣ ಮಾತನಾಡಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜುರಾತ್‌ನಲ್ಲಿ ನಡೆದ ಚುನಾವಣೆಗಳಲ್ಲಿ ಮತಯಂತ್ರಗಳನ್ನು ತಿರುಚಿಸಲಾಗಿದೆ ಎಂದರು.

Advertisement

ಈ ವೇಳೆ ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ಈರಣ್ಣ ಮೌರ್ಯ, ಜಿಲ್ಲಾ ಕಾರ್ಯದರ್ಶಿ ಮುನಿರಾಜು, ಪ್ರಧಾನ ಕಾರ್ಯದರ್ಶಿ ಮಹೇಶ್‌ ದಾಸ್‌, ತಾಲೂಕು ಅಧ್ಯಕ್ಷ ಕೆ ಬಂಗಾರಪ್ಪ, ಜಿಲ್ಲಾ ಖಜಾಂಚಿ ನರಸಿಂಹರಾಜು, ನೆಲಮಂಗಲ ತಾಲೂಕು ಅಧ್ಯಕ್ಷ ಮಹದೇವ್‌, ವ‌ುಹಿಳಾ ಘಟಕದ ಅಧ್ಯಕ್ಷೆ ರಮಾ ದೇವಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next