ಹೊಸದಿಲ್ಲಿ: ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ವಿರುದ್ಧ ತೀವ್ರ ದರ ಸಮರಕ್ಕೆ ಮುಂದಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿ. (ಬಿಎಸ್‌ಎನ್‌ಎಲ್) ಇದೀಗ 249 ರೂ.ಗೆ ಮಾಸಿಕ 300ಜಿಬಿ ಡಾಟಾ ಆಫರ್ ಪ್ರಕಟಿಸಿದೆ. ಈ ಆಫರ್ ಪ್ರಕಾರ ಗ್ರಾಹಕರು ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾವುದೇ ನೆಟ್‌ವರ್ಕ್‌ಗೆ ಉಚಿತ ಅನಿಯ ಮಿತ ಕರೆ ಮಾಡಬಹುದಾಗಿದೆ. “ಅನ್‌ಲಿಮಿ ಟೆಡ್ ಬ್ರಾಡ್‌ಬ್ಯಾಂಡ್ ಎಟ್ 249′ ಹೆಸರಿ ಆಫರ್ ಇದಾಗಿದ್ದು, ದಿನಕ್ಕೆ 10 ಜಿಬಿ ವರೆಗೆ ಡಾಟಾ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಷ್ಟು ಕಡಿಮೆ ದರಕ್ಕೆ ಆಫರ್ ನೀಡುವ ಏಕೈಕ ಟೆಲಿಕಾಂ ಕಂಪನಿ ನಮ್ಮದಾಗಿದೆ ಎಂದು ಬಿಎಸ್‌ಎನ್‌ಎಲ್ ಹೇಳಿಕೊಂಡಿದೆ.
ಜಿಯೋ 15 ದಿನ ವಿಸ್ತರಣೆ
ಜಿಯೋ ಪ್ರೈಂ ಸೇವೆಗೆ ನೋಂದಣಿ ಯಾಗಲು ವಿಧಿಸಿದ್ದ ಮಾ. 31ರ ಗಡುವನ್ನು ರಿಲಾಯನ್ಸ್ ಜಿಯೋ ಸಂಸ್ಥೆ 15 ದಿನಗಳ ಕಾಲ ವಿಸ್ತರಿಸಿದೆ. ಇದರಂತೆ, ಗ್ರಾಹಕರು 303 ರೂ. ಅದಕ್ಕಿಂತ ಹೆಚ್ಚು ಮಾಸಿಕ ಶುಲ್ಕ ಮತ್ತು 99 ರೂ. ನೋಂದಣಿ ಶುಲ್ಕ ಪಾವತಿಸಿ ಎ.15ರವರೆಗೆ ಸದಸ್ಯತ್ವ ಪಡೆಯಬಹು ದಾಗಿದೆ. ಇದೇ ವೇಳೆ, ಎ.15ರೊಳಗೆ ಯಾರು 303 ರೂ. ಪಾವತಿಸಿ ಪ್ರೈಂ ಸದಸ್ಯತ್ವ ಪಡೆಯುತ್ತಾರೋ, ಅವರಿಗೆ 3 ತಿಂಗಳ ಉತ್ತೇಜನಾ ಕೊಡುಗೆಯನ್ನೂ ಘೋಷಿಸಲಾಗಿದೆ.