Advertisement

ಬಿಎಸ್‌ಎಫ್ ಪ್ರಧಾನ ಕಚೇರಿಯ ಎರಡನೇ ಮಹಡಿ ಸೀಲ್ಡ್ ಡೌನ್

08:18 AM May 05, 2020 | Hari Prasad |

ಹೊಸದಿಲ್ಲಿ: ಗಡಿ ಭದ್ರತಾ ಪಡೆಯ ದಿಲ್ಲಿಯ ಪ್ರಧಾನ ಕಚೇರಿಯಲ್ಲಿನ ಸಿಬ್ಬಂದಿಯೊಬ್ಬರಿಗೆ ಕೋವಿಡ್ 19 ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ, ಕಚೇರಿಯ ಎರಡು ಮಹಡಿಗಳನ್ನು ಸೀಲ್‌ ಮಾಡಲಾಗಿದೆ.

Advertisement

8 ಮಹಡಿಗಳ ಬಿಎಸ್‌ಎಫ್ ಕಚೇರಿಯು ಲೋಧಿ ರಸ್ತೆಯ ಸಿಜಿಒ ಸಂಕೀರ್ಣದಲ್ಲಿದ್ದು, ಸಿಆರ್‌ಪಿಎಫ್ ಪ್ರಧಾನ ಕಚೇರಿಯೂ ಇದೇ ಸಂಕೀರ್ಣದಲ್ಲಿದೆ. ಸಿಆರ್‌ಪಿಎಫ್ ನ ಇಬ್ಬರು ಸಿಬ್ಬಂದಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟ ಕಾರಣ, ಆ ಕಚೇರಿಗೂ ಬೀಗ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

13 ಮಂದಿಗೆ ಸೋಂಕು: ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್) ಯೋಧರಿಗೆ ಕೋವಿಡ್ ಸೋಂಕು ತಗುಲಿ ಇಡೀ ಬಟಾಲಿಯನ್‌ ಅನ್ನೇ ಕ್ವಾರೆಂಟೈನ್‌ಗೆ ಒಳಪಡಿಸಲಾದ ಬೆನ್ನಲ್ಲೇ ಇದೀಗ ಗಡಿ ಕಾವಲು ಪಡೆ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಒಟ್ಟಾರೆ 13 ಮಂದಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿಗೆ ತುತ್ತಾದವರಲ್ಲಿ 9 ಮಂದಿ ಟೊರ್ನಿಯಾದಲ್ಲಿರುವ 25ನೇ ಬಟಾಲಿಯನ್‌ಗೆ ಸೇರಿದವರಾಗಿದ್ದಾರೆ. ಸೋಂಕಿತರನ್ನೆಲ್ಲ ಇದೀಗ ಆಸ್ಪತ್ರೆ ಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next