ಮುಂಬಯಿ : ದೇಶದ ಸ್ಥೂಲ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ತೃಪ್ತಿಕರವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 140 ಅಂಕಗಳ ನಷ್ಟಕ್ಕೆ ಗುರಿಯಾಗಿರುವ ಹೊರತಾಗಿಯೂ ಅನಂತರದಲ್ಲಿ ಚೇತರಿಕೆಯನ್ನು ಕಂಡು 46 ಅಂಕಗಳ ಜಿಗಿತವನ್ನು ದಾಖಲಿಸಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ ಮತ್ತೆ ಕುಸಿತದ ಹಾದಿಯನ್ನು ಹಿಡಿದು 29.49 ಅಂಕಗಳ ನಷ್ಟದೊಂದಿಗೆ 34,783.50 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.70 ಅಂಕಗಳ ನಷ್ಟದೊಂದಿಗೆ 10,475.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 29 ಪೈಸೆಯ ಚೇತರಿಕೆಯನ್ನು ಕಂಡು 72.60 ರೂ. ಮಟ್ಟಕ್ಕೆ ಏರುವ ಮೂಲಕ ದೃಢತೆಯನ್ನು ತೋರಿತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಈಶರ್ ಮೋಟರ್, ಮಾರುತಿ ಸುಜುಕಿ, ರಿಲಯನ್ಸ್, ಟೆಕ್ ಮಹೀಂದ್ರ, ಟೈಟಾನ್ ಕಂಪೆನಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು: ಎಚ್‌ಪಿಸಿಎಲ್, ಬಿಪಿಸಿಎಲ್, ಐಓಸಿ, ಅಲ್‌ಟ್ರಾ ಟೆಕ್ ಸಿಮೆಂಟ್, ಕೋಲ್ ಇಂಡಿಯಾ. ಟಾಪ್ ಲೂಸರ್‌ಗಳು : ಸನ್ ಫಾರ್ಮಾ, ಟಾಟಾ ಮೋಟರ್, ಇಂಡಿಯಾ ಬುಲ್ಸ್ ಹೌಸಿಂಗ್, ಯುಪಿಎಲ್, ಟೈಟಾನ್ ಕಂಪೆನಿ.