Advertisement

ಮುಂಬಯಿ ಶೇರು ಪೇಟೆ ಅಲ್ಪ ಏರಿಕೆ: ಸೆನ್ಸೆಕ್ಸ್‌ 47 ಅಂಕ

05:00 PM Dec 03, 2018 | |

ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 46.70 ಅಂಕಗಳ ಮುನ್ನಡೆಯೊಂದಿಗೆ 36,241 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 7 ಅಂಕಗಳ ಮುನ್ನಡೆಗೆ ತೃಪ್ತಿ ಪಟ್ಟು ದಿನದ ವಹಿವಾಟನ್ನು 10,883.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು   2,779 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,321 ಕಂಪೆನಿಗಳು ಮುನ್ನಡೆ ಸಾಧಿಸಿದವು;  1,263 ಕಂಪೆನಿಗಳು ಹಿನ್ನಡೆಗೆ ಗುರಿಯಾದವು;  195 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

ಇಂದಿನ ಟಾಪ್‌ ಗೇನರ್‌ಗಳು : ಇಂಡಿಯಾಬುಲ್ಸ ಹೌಸಿಂಗ್‌, ಎಸ್‌ ಬ್ಯಾ,ಕ್‌, ಎಚ್‌ಯುಎಲ್‌, ಗೇಲ್‌, ವೇದಾಂತ; ಟಾಪ್‌ ಲೂಸರ್‌ಗಳು : ಸನ್‌ ಫಾರ್ಮಾ, ಮಹೀಂದ್ರ, ಯುಪಿಎಲ್‌, ಎಚ್‌ಪಿಸಿಎಲ್‌, ಝೀ ಎಂಟರ್‌ಟೇನ್‌ಮೆಂಟ್‌. 

Advertisement

Udayavani is now on Telegram. Click here to join our channel and stay updated with the latest news.

Next