ಮುಂಬಯಿ : ಹಣದುಬ್ಬರ ಕುಗ್ಗಿರುವುದು, ಕೈಗಾರಿಕಾ ಉತ್ಪಾದನೆ ಏರಿರುವುದು ಮುಂಬಯ ಶೇರು ಮಾರುಕಟ್ಟೆಗೆ ಡಬಲ್ ಬೂಸ್ಟ್ ಆಗಿ ಪರಿಣಮಿಸಿದೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 102 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಬೆಳಗ್ಗೆ 11.45ರ ಹೊತ್ತಿಗೆ ಸೆನ್ಸೆಕ್ಸ್ 89.68 ಅಂಕಗಳ ಮುನ್ನಡೆಯೊಂದಿಗೆ 31,185.38 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.85 ಅಂಕಗಳ ಮುನ್ನಡೆಯೊಂದಿಗೆ 9,460.25 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಸನ್ ಫಾರ್ಮಾ, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್ ಇಂದು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್ಗಳು : ಎಚ್ ಡಿ ಎಫ್ ಸಿ, ಎಸಿಸಿ, ಬ್ಯಾಂಕ್ ಆಫ್ ಬರೋಡ, ಸನ್ ಫಾರ್ಮಾ, ಬಾಶ್; ಟಾಪ್ ಲೂಸರ್ಗಳು : ಟೆಕ್ ಮಹೀಂದ್ರ, ವಿಪ್ರೋ, ಟಾಟಾ ಮೋಟರ್, ಎಚ್ಸಿಎಲ್ ಟೆಕ್, ಟಾಟಾ ಮೋಟರ್.