Advertisement

ಬಿಎಸ್‌ಇ ಸೂಚ್ಯಂಕ ಭಾರೀ ಇಳಿಕೆ

11:08 PM Dec 15, 2022 | |

ಮುಂಬಯಿ: ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಶೇ.0.50 ಏರಿಕೆ ಮಾಡಿದ ಪರಿಣಾಮ ಬಾಂಬೆ ಷೇರು ಪೇಟೆಯ ಮೇಲೆ ಬಿದ್ದಿದೆ. ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕ 878.88 ಪಾಯಿಂಟ್ಸ್‌ ಕುಸಿತಗೊಂಡು 61,799.03ರಲ್ಲಿ ಮುಕ್ತಾಯಗೊಂಡಿತು.

Advertisement

ಇದರ ಜತೆಗೆ ನಿಫ್ಟಿ ಸೂಚ್ಯಂಕ 245.40 ಪಾಯಿಂಟ್ಸ್‌ ಕುಸಿತಗೊಂಡು 18, 414.90ರಲ್ಲಿ ಮುಕ್ತಾಯಗೊಂಡಿದೆ. ಜಗತ್ತಿನ ಇತರ ಷೇರು ಮಾರುಕಟ್ಟೆಗಳಾದ ಸಿಯೋಲ್‌, ಟೋಕಿಯೋ, ಶಾಂಘಾç, ಹಾಂಕಾಂಗ್‌ ಷೇರು ಪೇಟೆಗಳಲ್ಲಿ ನಿರಾಶಾದಾಯಕ ವಹಿವಾಟು ಉಂಟಾಗಿದೆ.

ಅಮೆರಿಕದಲ್ಲಿ ಬಡ್ಡಿ ಏರಿಕೆ ಮಾಡಿದ್ದರಿಂದ ಶೇ.4.50ಕ್ಕೆ ಹೆಚ್ಚಾಗಿದೆ. ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಬಡ್ಡಿ ದರವನ್ನು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next