ಮುಂಬಯಿ : ವಿದೇಶಿ ಹೂಡಿಕೆದಾರ ಸಂಸ್ಥೆಗಳು ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ಉತ್ತಮ ತೇಜಿ ಕಂಡು ಬಂದಿದ್ದು ಆರಂಭಿಕ ವಹಿವಾಟಿನಲ್ಲಿ 119 ಅಂಕಗಳ ಜಿಗಿತವನ್ನು ಸಾಧಿಸಿದೆ.
ಬ್ಯಾಂಕಿಂಗ್, ಮೆಟಲ್, ಆಟೋ ಕ್ಷೇತ್ರಗಳ ಶೇರುಗಳಲ್ಲಿ ವಿದೇಶಿ ಹೂಡಿಕೆದಾರರ ವಿಶೇಷ ಒಲವು ತೋರಿರುವುದು ಇಂದಿನ ಆರಂಭಿಕ ವಹಿವಾಟಿನಲ್ಲಿ ನಿಚ್ಚಳವಾಗಿದೆ.
ಹಾಗಿದ್ದರೂ ಬೆಳಗ್ಗೆ 11.30ರ ಸುಮಾರಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಹಿನ್ನಡೆಗೆ ಗುರಿಯಾಗಿ 63.29 ಅಂಕಗಳ ನಷ್ಟದೊಂದಿಗೆ 38,323.46 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.80 ಅಂಕಗಳ ನಷ್ಟದೊಂದಿಗೆ 11,500.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಮಾರುತಿ ಸುಜುಕಿ, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಎಕ್ಸಿಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಆರು ಪೈಸೆಗಳ ಏರಿಕೆಯನ್ನು ದಾಖಲಿಸಿ 68.57 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.