Advertisement

ಆರಂಭಿಕ ವಹಿವಾಟಿನಲ್ಲಿ 179 ಅಂಕ ಜಿಗಿದ ಮುಂಬಯಿ ಶೇರು

10:29 AM Aug 28, 2017 | |

ಮುಂಬಯಿ : ಐಟಿ, ಫಾರ್ಮಾ ಮತ್ತು ಎಫ್ಎಂಸಿಜಿ ಶೇರುಗಳು ಉತ್ತಮ ಖರೀದಿಯನ್ನು ಕಂಡ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 179 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿತು.

Advertisement

ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 180.40 ಅಂಕಗಳ ಮುನ್ನಡೆಯನ್ನು ಕಂಡು 31,776.46 ಅಂಕಗಳ ಮಟ್ಟಕ್ಕೇರಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 55.35 ಅಂಕಗಳ ಏರಿಕೆಯನ್ನು ಕಂಡು 9,912.40 ಅಂಕಗಳ ಮಟ್ಟವನ್ನು ತಲುಪಿತು.

ಇನ್‌ಫೋಸಿಸ್‌, ಎಚ್‌ ಡಿ ಎಫ್ ಸಿ, ಅರಬಿಂದೋ ಫಾರ್ಮಾ, ರಿಲಯನ್ಸ್‌ ಮತ್ತು ಟಿಸಿಎಸ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

ಈಶರ್‌ ಮೋಟರ್‌, ಇನ್‌ಫೋಸಿಸ್‌, ಅದಾನಿ ಪೋಟ್‌ರ, ಸನ್‌ ಫಾರ್ಮಾ, ಎನ್‌ಟಿಪಿಸಿ ಶೇರುಗಲು ಟಾಪ್‌ ಗೇನರ್‌ ಎನಿಸಿಕೊಂಡವು. ಇದೇ ವೇಳೆ ಟಾಪ್‌ ಲೂಸರ್‌ಗಳಾಗಿ ಡಾ. ರೆಡ್ಡಿ, ಪವರ್‌ ಗ್ರಿಡ್‌, ಟಿಸಿಎಸ್‌, ಬಿಪಿಸಿಎಲ್‌, ಬಜಾಜ್‌ ಆಟೋ ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next