ಮುಂಬಯಿ: ಬಜೆಟ್ ಮಂಡನೆಯ ದಿನವಾಗಿರುವ ಇಂದು ಗುರುವಾರ ಭರ್ಜರಿ ತೇಜಿ ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಅನುಕ್ರಮವಾಗಿ 36,000 ಅಂಕಗಳ ಹಾಗೂ 11,000 ಅಂಕಗಳ ಮಟ್ಟವನ್ನು ದಾಟಿದೆ.
ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್ 168.18 ಅಂಕಗಳ ಜಿಗಿತದೊಂದಿಗೆ 36,133.20 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 45.50 ಅಂಕಗಳ ಜಿಗಿತದೊಂದಿಗೆ 11,073.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಲಾರ್ಸನ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ, ಇನ್‌ಫೋಸಿಸ್, ವೇದಾಂತ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ವವು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ವಹಿವಾಟಿನಲ್ಲಿ 318.23 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
Related Articles
ಬೆಳಗ್ಗಿನ ವಹಿವಾಟಿನಲ್ಲಿ 2,449 ಶೇರುಗಳು ವ್ಯವಹಾರಕ್ಕೆ ಒಳಪಟ್ಟಿದ್ದವು; 1,438 ಶೇರುಗಳು ಮುನ್ನಡೆ ಸಾಧಿಸಿದ್ದವು; 900 ಶೇರುಗಳು ಹಿನ್ನಡೆಗೆ ಗುರಿಯಾಗಿದ್ದವು; 111 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಬಜೆಟ್ ಬೂಸ್ಟ್ ನಿರೀಕ್ಷೆ, ಸೆನ್ಸೆಕ್ಸ್ 36,133, ನಿಫ್ಟಿ 11,073,