ಮುಂಬಯಿ : ದೇಶೀಯ ಹೂಡಿಕೆ ಸಂಸ್ಥೆಗಳು ಖರೀದಿಯಲ್ಲಿ ತೋರಿದ ಆಸಕ್ತಿಯ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗಿನ ವಹಿವಾಟಿನಲ್ಲಿ 260 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಬೆಳಗ್ಗಿನ ವಹಿವಾಟಿಲ್ಲಿ 10,500 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಇಂದು ಸಂಜೆ ಬಿಡುಗಡೆಗೊಳ್ಳುವ ಹಣದುಬ್ಬರದ ಅಂಕಿ ಅಂಶಗಳ ಬಗೆಗೂ ಶೇರು ಮಾರುಕಟ್ಟೆ ಕುತೂಹಲದಿಂದ್ದು ಏಶ್ಯನ್‌ಶೇರು ಪೇಟೆಗಳು ಇಂದು ಉತ್ತಮ ಆರಂಭ ಕಂಡ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂತು. ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 15 ಪೈಸೆಯಷ್ಟು ಸುಧಾರಿಸಿತು.
ಬೆಳಗ್ಗೆ 10.35ರ ಹೊತ್ತಿಗೆ ಸೆನ್ಸೆಕ್ಸ್ 195.07 ಅಂಕಗಳ ಮುನ್ನಡೆಯೊಂದಿಗೆ 34,203.45 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,508.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್‌ಬಿಐ, ಟಾಟಾ ಸ್ಟೀಲ್, ಸನ್ ಫಾರ್ಮಾ, ಒಎನ್‌ಜಿಸಿ ಮತ್ತು ಎಚ್ ಡಿ ಎಫ್ಸಿ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.