ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗಿನ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಉತ್ತಮ ಮುನ್ನಡೆಯನ್ನು ದಾಖಲಿಸಿತು. ಐಟಿ, ರಿಯಲ್ಟಿ ಮತ್ತು ಕ್ಯಾಪಿಟಲ್ ಗೂಡ್ಸ್ ಶೇರುಗಳು ಇಂದು ಉತ್ತಮ ಖರೀದಿಯನ್ನು ಕಂಡದ್ದೇ ಸೆನ್ಸೆಕ್ಸ್ ಜಿಗಿತಕ್ಕೆ ಕಾರಣವಾಯಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಒಟ್ಟು 360.17 ಅಂಕಗಳನ್ನು ಸಂಪಾದಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗಿನ 10.30ರ ಹೊತ್ತಿಗೆ 226.43 ಅಂಕಗಳ ಮುನ್ನಡೆಯೊಂದಿಗೆ 36,161.15 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 61.60 ಅಂಕಗಳ ಜಿಗಿತದೊಂದಿಗೆ 10,914.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 12 ಪೈಸೆ ಕುಸಿದು 68.84 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಟಿಸಿಎಸ್, ಎಚ್ ಸಿ ಎಲ್ ಟೆಕ್, ಎಸ್ ಬ್ಯಾಂಕ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಹಿಂಡಾಲ್ಕೊ, ಎಚ್‌ಸಿಎಲ್‌ಟೆಕ್, ಯುಪಿಎಲ್, ರಿಲಯನ್ಸ್; ಟಾಪ್ ಲೂಸರ್‌ಗಳು : ಎಚ್‌ಪಿಸಿಎಲ್, ಸನ್ ಫಾರ್ಮಾ, ಕೋಟಕ್ ಮಹೀಂದ್ರ, ಲೂಪಿನ್, ಮಹೀಂದ್ರ.