ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆ ಇಂದು ಗುರುವಾರ ಸಂಪೂರ್ಣವಾಗಿ ಕರಡಿ ಹಿಡಿತಕ್ಕೆ ಒಳಪಟ್ಟಿತು. ಸೆನ್ಸೆಕ್ಸ್ ಇಂದು 356 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 37,165.16 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 101.50 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,244.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ 84.96 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಒಂದು ವಾರದ ಅವಧಿಯ ತಳಮಟ್ಟಕ್ಕೆ ಕುಸಿಯಿತು.
ಅಮೆರಿಕ – ಚೀನ ನಡುವೆ ವಾಣಿಜ್ಯ ಸಮರ ಮತ್ತೆ ಚುರುಕಾಗುವ ಭೀತಿ ತಲೆದೋರಿರುವ ಕಾರಣ ಐರೋಪ್ಯ ಮತ್ತು ಏಶ್ಯನ್ ಶೇರು ಮಾರುಕಟ್ಟೆಗಳು ಇಂದು ಮಂಕಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,824 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,343 ಶೇರುಗಳು ಮುನ್ನಡೆ ಸಾಧಿಸಿದವು; 1,325 ಶೇರುಗಳು ಹಿನ್ನಡೆ ಕಂಡವು; 156 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.