ಮುಂಬಯಿ : ನಿರೀಕ್ಷೆಗೂ ಮೀರಿದ ಉತ್ತಮ ತ್ತೈಮಾಸಿಕ ಫಲಿತಾಂಶಗಳು ಹೊರ ಬರುತ್ತಿರುವುದನ್ನು ಗಮನಿಸಿಕೊಂಡು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 10,043 ಅಂಕಗಳ ಹೊಸ ಎತ್ತರವನ್ನು ತಲುಪುವ ಸಾಧನೆಯನ್ನು ಮಾಡಿತು.
ಇದೇ ವೇಳೆ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 133 ಅಂಕಗಳ ಏರಿಕೆಯನ್ನು ದಾಖಲಿಸಿ ಮುನ್ನುಗ್ಗುವ ಸಾಧನೆಯನ್ನು ಇಂದಿನ ಆರಂಭಿಕ ವಹಿವಾಟಿನಲ್ಲಿ ಮಾಡಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 67.04 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡದ 32376.92 ಅಂಕಗಳ ಮಟ್ಟದಲ್ಲೂ, ನಿಫ್ಟಿ 15 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,029.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಲಾರ್ಸನ್, ಇನ್‌ಫೋಸಿಸ್, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಟಾ ಸ್ಟೀಲ್, ಲಾರ್ಸನ್, ಒಎನ್‌ಜಿಸಿ, ವೇದಾಂತ, ಕೋಟಕ್ ಮಹೀಂದ್ರ ಶೇರುಗಳು ಟಾಪ್ ಗೇನರ್ ಎನಿಸಿಕೊಂಡಿದ್ದವು. ಟಾಪ್ ಲೂಸರ್‌ಗಳಾಗಿ ಡಾ. ರೆಡ್ಡಿ, ಸನ್ ಫಾರ್ಮಾ, ಐಡಿಯಾ ಸೆಲ್ಯುಲರ್, ಲೂಪಿನ್, ಎಸ್ ಬ್ಯಾಂಕ್ ಶೇರುಗಳು ಕಾಣಿಸಿಕೊಂಡವು.