ಮುಂಬಯಿ : ಕೈಗಾರಿಕಾ ಉತ್ಪಾದನೆ ಪ್ರಗತಿಯ ಅಂಕಿ ಅಂಶಗಳು ಇಂದು ಬಿಡುಗಡೆಗೊಳ್ಳಲಿರುವಂತೆಯೇ ದೇಶೀಯ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 113 ಅಂಕಗಳ ಏರಿಕೆಯನ್ನು ದಾಖಲಿಸಿತು.
ಬೆಳಗ್ಗೆ 10.30ರ ಹೊತ್ತಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 90.75 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 31,924.74 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಟ್ಟೆಯ ನಿಫ್ಟಿ ಸೂಚ್ಯಂಕ 28 ಅಂಕಗಳ ಮುನ್ನಡೆಯೊಂದಿಗೆ 10,012.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ನಾಲ್ಕು ಪೈಸೆಯಷ್ಟು ಸುಧಾರಿಸಿ 65.10 ರೂ.ಗೆ ತಲುಪಿರುವುದು ಶೇರು ಮಾರುಕಟ್ಟೆಗೆ ಉತ್ತೇಜನ ನೀಡಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸನ್ ಫಾರ್ಮಾ, ಟಿಸಿಎಸ್, ಹಿಂಡಾಲ್ಕೋ, ರಿಲಯನ್ಸ್, ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಇಂದು ಭಾತಿರ ಇನ್‌ಫ್ರಾಟೆಲ್, ಹಿಂಡಾಲ್ಕೋ, ಎಚ್‌ಯುಎಲ್, ಎನ್‌ಟಿಪಿಸಿ, ಅರಬಿಂದೋ ಫಾರ್ಮಾ ಶೇರುಗಳು ಕಾಣಿಸಿಕೊಂಡರೆ, ಟಾಪ್ ಲೂಸರ್‌ಗಳಾಗಿ ಭಾರ್ತಿ ಏರ್‌ಟೆಲ್, ಅಲ್‌ಟ್ರಾಟೆಕ್ ಸಿಮೆಂಟ್, ಏಶ್ಯನ್ ಪೇಂಟ್ಸ್, ಸಿಪ್ಲಾ ಮತ್ತು ಐಸಿಐಸಿಐ ಶೇರುಗಳು ಹಿನ್ನಡಗೆ ಗುರಿಯಾದವು.