Advertisement

ಸೆನ್ಸೆಕ್ಸ್‌ 147 ಅಂಕ ಜಿಗಿತ, ನಿಫ್ಟಿ ಮತ್ತೆ 10,600ರ ಮಟ್ಟಕ್ಕೆ

11:15 AM Apr 24, 2018 | |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ದೃಢತೆಯ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 147 ಅಂಕಗಳ ಜಿಗಿತವನ್ನು ದಾಖಲಿಸಿತು. ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ 10,600 ಅಂಕಗಳ ಮಟ್ಟವನ್ನು ಮತ್ತು ತಲುಪಿತು.

Advertisement

ಉತ್ತಮ ತ್ತೈಮಾಸಿಕ ಫ‌ಲಿತಾಂಶಗಳ ಕಾರಣಕ್ಕೆ ಬ್ಲೂ ಚಿಪ್‌ ಶೇರುಗಳ ವ್ಯಾಪಕ ಖರೀದಿಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆ ಮುನ್ನಡೆ ಸಾಧಿಸಿತು. 

ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 144.66 ಅಂಕಗಳ ಮುನ್ನಡೆಯನ್ನು  ಪಡೆದುಕೊಂಡು 34,595.43 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.60 ಅಂಕಗಳ ಮುನ್ನಡೆಯೊಂದಿಗೆ 10,60.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಎಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಲೂಡಿದ್‌, ರಿಲಯನ್ಸ್‌, ಡಾ. ರೆಡ್ಡೀಸ್‌ ಲ್ಯಾಬ್‌ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡರೆ ಹಿಂಡಾಲ್ಕೋ, ವೇದಾಂತ, ವಿಪ್ರೋ, ಟೆಕ್‌ ಮಹೀಂದ್ರ, ಟಾಟಾ ಸ್ಟೀಲ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next