Advertisement

ಕೈಗಾರಿಕಾ ಉತ್ಪಾದನೆ ಕುಸಿತ : ಮುಂಬಯಿ ಶೇರು 156 ಅಂಕ ಕುಸಿತ

11:46 AM Jan 14, 2019 | udayavani editorial |

ಮುಂಬಯಿ : ಕೈಗಾರಿಕಾ ಉತ್ಪಾದನೆ ಅಂಕಿ ಅಂಶಗಳು ನಿರಾಶಾದಾಯಕವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಬೇಕಾಬಿಟ್ಟಿ ಶೇರು ಮಾರಾಟಕ್ಕೆ ಮುಂದಾದ ಕಾರಣ ಮತ್ತು ಏಶ್ಯನ್‌ ಶೇರು ಪೇಟೆಗಳಲ್ಲಿ ದೌರ್ಬಲ್ಯ ತೋರಿ ಬಂದ ಕಾರಣ ಮುಂಬಯಿ ಶೇರು ಪೇಟೆ 156.28 ಅಂಕಗಳ ನಷ್ಟಕ್ಕೆ ಗುರಿಯಾಗಿ ಇಂದು ಸೋಮವಾರದ ವಹಿವಾಟನ್ನು 35,853.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57.35 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,737.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದು ಬಹುವಾಗಿ ನಷ್ಟ ಕಂಡ ಲಾರ್ಸನ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಪವರ್‌ ಗ್ರಿಡ್‌, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಹೀರೋ ಮೋಟೋ ಕಾರ್ಪ್‌, ಭಾರ್ತಿ ಏರ್‌ಟೆಲ್‌ ಮತ್ತು ಎಸ್‌ಬಿಐ ಶೇ.2.64ರ ಕುಸಿತಕ್ಕೆ ಗುರಿಯಾದವು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು   2,714ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,014 ಕಂಪೆನಿಗಳು ಮುನ್ನಡೆ ಸಾಧಿಸಿದವು;  1,508 ಕಂಪೆನಿಗಳು ಹಿನ್ನಡೆಗೆ ಗುರಿಯಾದವು;  192 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next