ಮುಂಬಯಿ : ಡಾಲರ್ ಎದುರು ರೂಪಾಯಿ ಹೊಸ ಸಾರ್ವಕಾಲಿಕ ತಳಮಟ್ಟವಾಗಿ 72.44 ರೂ.ಗೆ ಕುಸಿದಿರುವ ಹಿನ್ನೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11.20ರ ಹೊತ್ತಿಗೆ ಸೆನ್ಸೆಕ್ಸ್ 280.60 ಅಂಕಗಳ ನಷ್ಟದೊಂದಿಗೆ 38,109.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 92.70 ಅಂಕಗಳ ನಷ್ಟದೊಂದಿಗೆ 11,496.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ರಿಲಯನ್ಸ್, ಲೂಪಿನ್, ಟಾಟಾ ಮೋಟರ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ವಹಿವಾಟಿನಲ್ಲಿ 371.51 ಅಂಕಗಳನ್ನು ಸಂಪಾದಿಸಿತ್ತು. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದು ದುರ್ಬಲ ಪ್ರವೃತ್ತಿ ಇಂದು ಏಶ್ಯನ್ ಶೇರು ಪೇಟೆಗಳಲ್ಲಿ ಕಾಣಿಸಿಕೊಂಡಿತು.
ಟಾಪ್ ಗೇನರ್‌ಗಳು : ಎಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಇನ್‌ಫೋಸಿಸ್, ಲೂಪಿನ್, ಟಾಟಾ ಮೋಟರ್; ಟಾಪ್ ಲೂಸರ್‌ಗಳು : ಅಲ್‌ಟ್ರಾ ಟೆಕ್ ಸಿಮೆಂಟ್, ಪವರ್ ಗ್ರಿಡ್, ಬಜಾಜ್ ಫಿನ್, ಕೋಟಕ್ ಮಹೀಂದ್ರ, ಬಿಪಿಸಿಎಲ್.