ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸನ್ನಿವೇಶ ನೆಲೆಗೊಂಡಿರುವುದನ್ನು ಅನುಸರಿಸಿದ ಮುಂಬಯಿ ಶೇರು ಮಾರುಕಟ್ಟೆ ಇಂದು ಶುಕ್ರವಾರದ ವಹಿವಾಟನ್ನು 134 ಅಂಕಗಳ ಜಿಗಿತದೊಂದಿಗೆ ಆರಂಭಿಸಿತು.
ದೇಶದ ಸ್ಥೂಲ ಆರ್ಥಿಕ ಪ್ರಗತಿ ಕುರಿತ ಅಂಕಿ ಅಂಶಗಳನ್ನು ಸರಕಾರ ಇಂದು ಬಿಡುಗಡೆ ಮಾಡಲಿರುವುದನ್ನು ಹೂಡಿಕೆದಾರರು ಅತ್ಯಾಸಕ್ತಿಯಿಂದ ಎದುರು ನೋಡುತ್ತಿರುವುದು ಹಾಗೂ ಡಾಲರ್ ಎದುರು ರೂಪಾಯಿ 21 ಪೈಸೆಯಷ್ಟು ಸುಧಾರಿಸಿ 67.11 ರೂ. ಮಟ್ಟದಲ್ಲಿ ಸ್ಥಿತವಾಗಿರುವುದು ಶೇರು ಪೇಟೆಯಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 83.23 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,329.50 ಅಂಕಗಳಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 32.80 ಅಂಕಗಳೊಂದಿಗೆ 10,749.30 ಅಂಕಗಳ ಮಟ್ಟದಲ್ಲೂ ವ್ಯವಹಾರನಿರತವಾಗಿದ್ದವು.
ಟೈಟಾನ್ ಕಂಪೆನಿ, ಭಾರ್ತಿ ಏರ್‌ಟೆಲ್, ಏಶ್ಯನ್ ಪೇಂಟ್, ಟಿಸಿಎಸ್, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ನಿಫ್ಟಿ ಗೇನರ್‌ಗಳು : ಏಶ್ಯನ್ ಪೇಂಟ್, ಎಚ್‌ಪಿಸಿಎಲ್, ಬಜಾಜ್ ಫಿನಾನ್ಸ್, ಬಿಪಿಸಿಎಲ್, ಯುಪಿಎಲ್; ಟಾಪ್ ನಿಫ್ಟಿ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಹೀರೋ ಮೋಟೋ ಕಾರ್ಪ್, ಭಾರ್ತಿ ಇನ್‌ಫ್ರಾಟೆಲ್.