ಮುಂಬಯಿ : ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 288 ಅಂಕಗಳ ಜಿಗಿತವನ್ನು ದಾಖಲಿಸಿತಾದರೆ ರಾಷ್ಟೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,800 ಅಂಕಗಳ ಮಟ್ಟವನ್ನು ದಾಟುವ ಸಾಧನೆ ಮಾಡಿತು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 33 ಪೈಸೆಗಳ ಏರಿಕೆಯನ್ನು ದಾಖಲಿಸಿ 69.39 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬೆಳಗ್ಗೆ 10.45ರ ಹೊತ್ತಿಗೆ ಸೆನೆಕ್ಸ್ 352.24 ಅಂಕಗಳ ಏರಿಕೆಯೊಂದಿಗೆ 36,047.34 ಅಂಕಗಳ ಮಟ್ಟದಲ್ಲೂ ನಿಫ್ಟಿ 98.70 ಅಂಕಗಳ ಮುನ್ನಡೆಯೊಂದಿಗೆ 10,826.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್, ಟೈಟಾನ್ ಕಂಪೆನಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಾಟಾ ಮೋಟರ್, ಇಂಡಸ್ ಇಂಡ್ ಬ್ಯಾಂಕ, ಎಕ್ಸಿಸ್ ಬ್ಯಾಂಕ್, ಟೈಟಾನ್ ಕಂಪೆನಿ, ಭಾರ್ತಿ ಇನ್‌ಫ್ರಾಟೆಲ್. ಟಾಪ್ ಲೂಸರ್‌ಗಳು : ಡಾ. ರೆಡ್ಡೀಸ್ ಲ್ಯಾಬ್, ಇಂಡಿಯಾ ಬುಲ್ಸ್ ಹೌಸಿಂಗ್, ಝೀ ಎಂಟರ್‌ಟೇನ್‌ಮೆಂಟ್, ಬಜಾಜ್ ಆಟೋ, ಕೋಟಕ್ ಮಹೀಂದ್ರ.