ಮುಂಬಯಿ : ನಿರಂತರ ನಾಲ್ಕನೇ ದಿನವೂ ತನ್ನ ನೆಲೆ ಭದ್ರಗೊಳಿಸುವಲ್ಲಿ ನಿರತವಾಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ಇಂದು ಬುಧವಾರದ ವಹಿವಾಟನ್ನು 26.38 ಅಂಕಗಳ ನಷ್ಟದೊಂದಿಗೆ 29,894.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.85 ಅಂಕಗಳ ನಷ್ಟದೊಂದಿಗೆ 9.311.95 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಇಂದು ರಾತ್ರಿ ಕೈಗೊಳ್ಳುವ ತನ್ನ ಬಡ್ಡಿ ದರ ಕುರಿತಾದ ನಡೆಯ ಬಗ್ಗೆ ಕೂಡ ಒಂದು ದೃಷ್ಟಿಯನ್ನು ಇರಿಸಿರುವ ಶೇರು ಮಾರುಕಟ್ಟೆ ಎಚ್ಚರಿಕೆಯ ನಡೆ ತೋರುತ್ತಿರುವುದು ಕೂಡ ಗಮನಾರ್ಹವಾಗಿದೆ.
ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಅಲ್ಟ್ರಾ ಟೆಕ್ ಸಿಮೆಂಟ್, ಟಿಸಿಎಸ್, ಕೋಲ್ ಇಂಡಿಯಾ ಶೇರುಗಳು ಟಾಪ್ ಗೇನರ್ ಎನಿಸಿದವು.
ಲೂಪಿನ್, ಅರಬಿಂದೋ ಫಾರ್ಮಾ, ಟಾಟಾ ಪವರ್, ಹಿಂಡಾಲ್ಕೊ ಮತ್ತು ಝೀ ಎಂಟರ್‌ಟೇನ್‌ಮೆಂಟ್ ಶೇರುಗಳು ಟಾಪ್ ಲೂಸರ್ ಎನಿಸಿದವು.