ಉಡುಪಿ: ಸರ್ವೋಚ್ಚ ನ್ಯಾಯಾಲಯ ಬಿಎಸ್ 4 ವಾಹನಗಳನ್ನು ಖರೀದಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ವಾಹನಗಳ ನೋಂದಣಿಗೆ ಹೆಚ್ಚಿನ ಬೇಡಿಕೆ ಕಂಡುಬಂತು.
Advertisement
ಶುಕ್ರವಾರ ಜಿಲ್ಲೆಯಲ್ಲಿ 29 ಕಾರು ಮತ್ತು 152 ದ್ವಿಚಕ್ರ ವಾಹನಗಳ ನೋಂದಣಿಯಾದವು. ಇದರಲ್ಲಿ ಒಂದು ಕಾರು ಮಾತ್ರ ಬಿಎಸ್ 3 ಮಾದರಿಯದ್ದಾಗಿತ್ತು. ಉಳಿದೆಲ್ಲವೂ ಬಿಎಸ್ 4 ಮಾದರಿಯವು. ಬೈಕ್‌ಗಳಲ್ಲಿ ಶೇ. 90 ಬಿಎಸ್ 3 ಮಾದರಿಯವು ಎಂದು ಸಾರಿಗೆ ಕಚೇರಿ ಮೂಲಗಳು ತಿಳಿಸಿವೆ.
Related Articles
ಮಂಗಳೂರು: ದ.ಕ. ಜಿಲ್ಲೆಯಲ್ಲೂ ದ್ವಿಚಕ್ರ ವಾಹನಗಳ ಕಂಪೆನಿಗಳು ಮಾ. 31ಕ್ಕೆ ಸೀಮಿತಗೊಳಿಸಿ ಬಿಎಸ್-3 ವಾಹನಗಳ ಮೇಲೆ 7 ಸಾವಿರದಿಂದ 22,000 ರೂ. ವರೆಗೆ ಭಾರೀ ರಿಯಾಯಿತಿ ಘೋಷಿಸಿದ ಪರಿಣಾಮ ದ್ವಿಚಕ್ರ ವಾಹನಗಳ ಮಾರಾಟ ಭರದಿಂದ ನಡೆದಿದೆ. ದ.ಕ. ಜಿಲ್ಲೆಯಲ್ಲಿ ವಿತರಕ ಸಂಸ್ಥೆಗಳಲ್ಲಿ ದಾಸ್ತಾನು ಇದ್ದ ಎಲ್ಲ ಬಿಎಸ್-3 ದ್ವಿಚಕ್ರ ವಾಹನಗಳು ಮಾರಾಟವಾಗಿವೆ.
Advertisement
ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 600 ದ್ವಿಚಕ್ರ ವಾಹನಗಳು ಹಾಗೂ ಪುತ್ತೂರು ಪ್ರಾದೇಶಿಕ ಸಾರಿಗ ಕಚೇರಿಯಲ್ಲಿ 139 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಶುಕ್ರವಾರ ಬೆಳಗಿನಿಂದಲೇ ಸಾರಿಗೆ ಪ್ರಾಧಿಕಾರ ಕಚೇರಿಗಳಲ್ಲಿ ನೋಂದಣಿಗೆ ದಟ್ಟಣೆ ಕಂಡು ಬಂದಿತ್ತು. ಎ. 1ರಿಂದ ಈ ವಾಹನಗಳಿಗೆ ನೋಂದಣಿಗೆ ಅವಕಾಶ ಇಲ್ಲದಿರುವ ಹಿನ್ನೆಲೆಯಲ್ಲಿ ಸಂಜೆಯವರೆಗೆ ವಾಹನಗಳ ನೋಂದಣಿ ನಡೆಯಿತು.