Advertisement
ಡಾ. ಪ್ರಮೋದ್ ಸಾವಂತ್ ಮಾತನಾಡಿ- ಭಾರತ ರಾಷ್ಟ್ರ ಸಮಿತಿ ಮುಖಂಡ ಕೆ. ಚಂದ್ರಶೇಖರ್ ರಾವ್ ಸ್ವತಂತ್ರ ತೆಲಂಗಾಣ ರಾಜ್ಯಕ್ಕಾಗಿ ಹೋರಾಡಿದರು. ನೀರು, ಹಣ, ಉದ್ಯೋಗಾವಕಾಶಗಳ ಬೇಡಿಕೆಯಿಂದ ಅವರು ಸ್ವತಂತ್ರ ರಾಜ್ಯವನ್ನು ಪಡೆದರು. ಆದರೆ ಅವರು ಮತ್ತು ಭಾರತ್ ರಾಷ್ಟ್ರ ಸಮಿತಿ ಪಕ್ಷವು ಈ ಬೇಡಿಕೆಗಳನ್ನು ಈಡೇರಿಸಲು, ತೆಲಂಗಾಣ ಜನತೆಯ ಆಶೋತ್ತರಗಳನ್ನು ಈಡೇರಿಸಲು ವಿಫಲವಾಗಿದೆ. ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಬಿಆರ್ ಎಸ್ ಒಂದೇ. ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳೂ ಹೌದು ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ. ಬಿಆರ್ ಎಸ್ ಕೋಮುಗಲಭೆಗಳನ್ನು ಪ್ರಚೋದಿಸುವ ಪಕ್ಷ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಆರೋಪಿಸಿದರು.
ಕಾಂಗ್ರೇಸ್ ಪಕ್ಷದಿಂದ ಗೆಲ್ಲುವ ನಾಯಕರು ಬಿಆರ್‍ಎಸ್‍ಗೆ ಹೋಗುತ್ತಾರೆ. ತೆಲಂಗಾಣ ಜನತೆಯ ನೀರು, ಅಭಿವೃದ್ಧಿಗೆ ಹಣ, ಉದ್ಯೋಗಗಳ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ನವ ಭಾರತದಂತೆ ನವ ತೆಲಂಗಾಣವನ್ನು ರಚಿಸಲು ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನವಿ ಮಾಡಿದರು. ತೆಲಂಗಾಣದಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 3 ರಂದು ಮತದಾನ ನಡೆಯಲಿದೆ. ತೆಲಂಗಾಣ 119 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಇದನ್ನೂ ಓದಿ: Priyanka Gandhi ಗೆ ಕೊಟ್ಟ ಬೊಕ್ಕೆಯಲ್ಲಿ ಹೂವೇ ಇರಲಿಲ್ಲ… ಮುಜುಗರಕ್ಕೆ ಒಳಗಾದ ನಾಯಕ