Advertisement
ಬ್ರೊಂಕೊಲೈಟಿಸ್ ಎಂದರೇನು?
Related Articles
Advertisement
ಲಕ್ಷಣಗಳನ್ನು ಗುರುತಿಸುವುದು
ರೋಗಲಕ್ಷಣಗಳನ್ನು ಗುರುತಿಸುವುದು ಶಿಶು ಈ ಕಾಯಿಲೆಯಿಂದ ಬಳಲದಂತೆ ಕಾಪಾಡಲು ಬಹಳ ಮುಖ್ಯವಾಗಿರುತ್ತದೆ. ಮೂಗಿನಿಂದ ಸಿಂಬಳ ಸುರಿಯುವುದು, ಕೆಮ್ಮು ಮತ್ತು ಜ್ವರ ಬ್ರೊಂಕೊಲೈಟಿಸ್ನ ಲಕ್ಷಣಗಳಲ್ಲಿ ಒಳಗೊಂಡಿವೆ. ಕಾಯಿಲೆ ಅಭಿವೃದ್ಧಿ ಹೊಂದುತ್ತಿದ್ದಂತೆ ಈ ಲಕ್ಷಣಗಳು ಉಲ್ಬಣಿಸುತ್ತವೆ ಮತ್ತು ಹೆತ್ತವರು ತತ್ ಕ್ಷಣ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.
ಬ್ರೊಂಕೊಲೈಟಿಸ್ ಉಲ್ಬಣವಾದಾಗ ಲಕ್ಷಣಗಳು ಈ ಕೆಳಕಂಡಂತೆ ಇರುತ್ತವೆ:
ಉಬ್ಬಸ
ವೇಗವಾದ ಉಸಿರಾಟ
ಉಸಿರಾಡಲು ಮೂಗಿನ ಹೊಳ್ಳೆಗಳನ್ನು ಅಗಲಗೊಳಿಸಬೇಕಾಗುವುದು
ಚರ್ಮ ನೀಲಿಗಟ್ಟುವುದು (ಸಯನೋಸಿಸ್)
ಕಿರಿಕಿರಿಗೊಳ್ಳುವುದು ಮತ್ತು ಆಹಾರ ಸೇವಿಸದಿರುವುದು
ಬ್ರೊಂಕೊಲೈಟಿಸ್ ನಿರ್ವಹಣೆ ಹೇಗೆ?
ಬ್ರೊಂಕೊಲೈಟಿಸ್ಗೆ ನಿರ್ದಿಷ್ಟವಾದ ಆ್ಯಂಟಿವೈರಲ್ ಚಿಕಿತ್ಸೆ ಇಲ್ಲ; ಶಿಶುವಿನ ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮತ್ತು ಶಿಶುವನ್ನು ಆರಾಮದಾಯಕವಾಗಿ ಇರಿಸುವುದು ಚಿಕಿತ್ಸೆಯ ಮೂಲಕ ಇದರ ನಿರ್ವಹಣೆಯ ಗುರಿಯಾಗಿರುತ್ತದೆ. ಆ್ಯಂಟಿಪೈರೆಟಿಕ್ಗಳು, ಬ್ರೊಂಕೊಡಯಲೇಟರ್ಗಳು ಮತ್ತು ಆ್ಯಂಟಿಬಯೋಟಿಕ್ ಔಷಧಗಳನ್ನು ಅಗತ್ಯಬಿದ್ದಲ್ಲಿ ನೀಡಲಾಗುತ್ತದೆ. ಬ್ರೊಂಕೊಲೈಟಿಸ್ ಉಲ್ಬಣಗೊಂಡ, ಅದರಲ್ಲೂ ಶಿಶುವಿನ ರಕ್ತದಲ್ಲಿ ಆಮ್ಲಜನಕ ಮಟ್ಟ ಕುಸಿತವಾಗುವುದು, ಉಸಿರಾಡಲು ಕಷ್ಟ ಅಥವಾ ನಿರ್ಜಲೀಕರಣಗೊಂಡಂತಹ ತೀವ್ರತರಹದ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾತಿ ಅಗತ್ಯವಾಗುತ್ತದೆ.
ಬ್ರೊಂಕೊಲೈಟಿಸ್ಗೆ ತುತ್ತಾದ ಶಿಶುವಿನ ನಿರ್ವಹಣೆಯಲ್ಲಿ ಹೆತ್ತವರಿಗೆ ಕೆಲವು ಸಲಹೆಗಳು
ಶಿಶು ಸಾಕಷ್ಟು ದ್ರವಾಹಾರ, ನೀರು ಸೇವಿಸುವಂತೆ ಪ್ರೋತ್ಸಾಹಿಸಿ
ತಾಜಾ ಮತ್ತು ಆದ್ರì ಗಾಳಿ ಓಡಾಡುವಂತಹ ಸ್ಥಳದಲ್ಲಿ ಇರಿಸಿ
ಉಸಿರಾಟಕ್ಕೆ ಸುಲಭವಾಗುವಂತೆ ಎದ್ದು ಕುಳಿತಿರಲಿ
ಬ್ರೊಂಕೊಲೈಟಿಸ್ ಉಂಟಾಗುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಬಹುದು?
ಬ್ರೊಂಕೊಲೈಟಿಸ್ ಉಂಟಾಗದಂತೆ ತಡೆಯುವುದಕ್ಕೆ ಅದರ ಪ್ರಸಾರವನ್ನು ನಿರ್ಬಂಧಿಸುವುದು ಮುಖ್ಯವಾಗಿರುತ್ತದೆ. ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳುವುದು, ಮೇಲ್ಮೆ„ಗಳನ್ನು ಸೋಂಕು ನಿವಾರಣಗೊಳಿಸುವುದು, ರೋಗಪೀಡಿತರ ಜತೆಗೆ ಸಂಪರ್ಕ ಉಂಟಾಗದಂತೆ ನೋಡಿಕೊಳ್ಳುವುದು ಇತ್ಯಾದಿ ಕ್ರಮಗಳಿಂದ ಶಿಶುವನ್ನು ರಕ್ಷಿಸಬಹುದಾಗಿದೆ. ಹೆಚ್ಚು ಅಪಾಯವುಳ್ಳ ಶಿಶುಗಳಿಗೆ ಆರ್ಎಸ್ವಿ ಸಾಮಾನ್ಯವಾಗಿರುವ ಸಮಯದಲ್ಲಿ ಮಾಸಿಕ ಪಾಲಿವಿಝುಮಾಬ್ ಇಂಜೆಕ್ಷನ್ ನೀಡುವುದರಿಂದ ಬ್ರೊಂಕೊಲೈಟಿಸ್ ಉಲ್ಬಣಗೊಳ್ಳುವ ಅಪಾಯವನ್ನು ತಪ್ಪಿಸಬಹುದಾಗಿದೆ.
ಸಾರಾಂಶ
ಬ್ರೊಂಕೊಲೈಟಿಸ್ ಎಂಬುದು ಆರ್ಎಸ್ವಿಯಂತಹ ವೈರಾಣು ಸೋಂಕಿನಿಂದ ಉಂಟಾಗುವ ಸಾಮಾನ್ಯ ಅದರೆ ಗಂಭೀರ ಶ್ವಾಸಾಂಗ ಕಾಯಿಲೆಯಾಗಿದೆ. ಆದಷ್ಟು ಬೇಗನೆ ಇದನ್ನು ಪತ್ತೆಹಚ್ಚುವುದು ಮತ್ತು ಪೂರಕ ಆರೈಕೆಯ ಮೂಲಕ ಈ ರೋಗಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದಾಗಿದೆ. ತಮ್ಮ ಶಿಶುಗಳು ಸೋಂಕಿಗೆ ತುತ್ತಾಗದಂತೆ ಪ್ರತಿಬಂಧಕ ಕ್ರಮಗಳನ್ನು ಹೆತ್ತವರು ಕೈಗೊಳ್ಳಬೇಕು, ಮಗು ತೀವ್ರತರಹದ ರೋಗಲಕ್ಷಣಗಳನ್ನು ಹೊಂದಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
-ಪ್ರಸಾಲಿ ಕುಲಾಲ್
ಅಸಿಸ್ಟೆಂಟ್ ಪ್ರೊಫೆಸರ್
-ಶಶಾಂಕ್ ಕುಲಾಲ್
ಅಸಿಸ್ಟೆಂಟ್ ಲೆಕ್ಚರರ್
ರೆಸ್ಪಿರೇಟರಿ ಥೆರಪಿ ವಿಭಾಗ
ಎಂಸಿಎಚ್ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್ ವಿಭಾಗ, ಕೆಎಂಸಿ, ಮಂಗಳೂರು)