Advertisement

ಕತಾರ್‌ ಜೆರ್ಸಿ ತೊಟ್ಟಿದ್ದಕ್ಕೆ ಬ್ರಿಟನ್‌ ಅಭಿಮಾನಿ ಬಂಧನ

12:55 AM Feb 07, 2019 | Team Udayavani |

ಅಬುಧಾಬಿ: ಯುಎಇನಲ್ಲಿ ಇತ್ತೀಚೆಗೆ ಎಎಫ್ಸಿ ಏಷ್ಯನ್‌ ಕಪ್‌ ಸುತ್ತು 16ರಲ್ಲಿ ನಡೆದ ಕತಾರ್‌-ಇರಾಕ್‌ ನಡುವಿನ ಪಂದ್ಯದ ವೇಳೆ ಬ್ರಿಟನ್‌ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ ಘಟನೆ ನಡೆದಿದೆ. ಬಂಧಿತನನ್ನು ಅಲಿ ಇಸ್ಸಾ ಅಹ್ಮದ್‌ ಎಂದು ಗುರುತಿಸಲಾಗಿದೆ. ಕತಾರ್‌ ಜೆರ್ಸಿ ತೊಟ್ಟಿರುವುದೇ ಬಂಧನಕ್ಕೆ ಕಾರಣ ಎನ್ನಲಾಗಿದೆ. ಯುಎಇನಲ್ಲಿ ಕತಾರ್‌ಗೆ ಯಾರೂ ಸಹಾಯ ಮಾಡಬಾರದು ಎನ್ನುವ ಕಾನೂನು ಇದೆ. ಅದನ್ನು ಮುರಿದಿದ್ದಕ್ಕೆ ಜೈಲು ಸೇರಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next