Advertisement

Britain:ನೆದರ್ಲೆಂಡ್‌ ಪ್ರಧಾನಿ ಬ್ರಿಟನ್‌ಗೆ ಆಗಮನ ವೇಳೆ ಮನೆ ಲಾಕ್‌- ರಿಷಿ ಸುನಕ್‌ಗೆ ಪೇಚು!

11:47 PM Dec 09, 2023 | Team Udayavani |

ಲಂಡನ್‌: ನೆದರ್ಲೆಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರು ಬ್ರಿಟನ್‌ಗೆ ಆಗಮಿಸಿದ್ದು, ಅವರನ್ನು ಬ್ರಿಟನ್‌ ಪ್ರಧಾನಿಗಳ ಅಧಿಕೃತ ನಿವಾಸ 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಪ್ರಧಾನಿ ರಿಷಿ ಸುನಕ್‌ ಆತ್ಮೀಯವಾಗಿ ಬರಮಾಡಿಕೊಂಡರು. ಆದರೆ ಮನೆಯ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ರಿಷಿ ಸುನಕ್‌ ಕೆಲ ಹೊತ್ತು ಪೇಚಿಗೆ ಸಿಲುಕಿದ ಘಟನೆ ನಡೆಯಿತು. ಕಾರಣ ಮನೆಯ ಬಾಗಿಲು ತಾತ್ಕಾಲಿಕವಾಗಿ ಲಾಕ್‌ ಆಗಿತ್ತು. ಕೆಲ ಸಮಯದ ನಂತರ ಬಾಗಿಲು ತೆರೆದಿದ್ದು, ಮಾರ್ಕ್‌ ರುಟ್ಟೆ ಅವರನ್ನು ಸುನಕ್‌ ಒಳಗೆ ಕರೆದುಕೊಂಡು ಹೋದರು.

Advertisement

ಆರಂಭದಲ್ಲಿ ಮನೆ ಬಾಗಿಲಿನ ಮುಂದೆಯೇ ಮಾರ್ಕ್‌ಗೆ ಹಸ್ತಲಾಘವ ಮಾಡಿ, ರಿಷಿ ಫೋಟೋಗೆ ಪೋಸ್‌ ಕೊಟ್ಟರು. ಇಷ್ಟಾದರೂ ಬಾಗಿಲು ತೆರೆಯಲಿಲ್ಲ. ಕೊನೆಗೆ ಒಳಗೆ ಯಾರಾದರೂ ಕಾಣುತ್ತಾರೆಯೇ ಎಂದು ಇಣುಕಿಯೂ ನೋಡಿದರು. ಕೊನೆಗೆ ಒಳಗಿನಿಂದ ಬಾಗಿಲು ಓಪನ್‌ ಆದಾಗ ಉಭಯ ನಾಯಕರೂ ನಿಟ್ಟುಸಿರು ಬಿಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next