Advertisement

ಆಸ್ಟ್ರೇಲಿಯದ ಬ್ರಿಸ್ಬೇನ್‌ಗೆ 2032ರ ಒಲಿಂಪಿಕ್ಸ್‌ ಆತಿಥ್ಯ

10:43 PM Jul 21, 2021 | Team Udayavani |

ಟೋಕಿಯೊ: “ಒನ್‌ ಸಿಟಿ ರೇಸ್‌’ನಲ್ಲಿ ಗೆದ್ದು ಬಂದ ಆಸ್ಟ್ರೇಲಿಯದ ಬ್ರಿಸ್ಬೇನ್‌ಗೆ 2032ರ ಒಲಿಂಪಿಕ್ಸ್‌ ಆತಿಥ್ಯ ಒಲಿದಿದೆ. ಬ್ರಿಸ್ಬೇನ್‌ 72-5 ಮತಗಳಿಂದ ಭರ್ಜರಿ ಮೇಲುಗೈ ಸಾಧಿಸಿದ್ದಾಗಿ ಐಒಸಿ ಪ್ರಕಟಿಸಿತು.

Advertisement

ಇದರಿಂದ 32 ವರ್ಷಗಳ ಬಳಿಕ ಆಸ್ಟ್ರೇಲಿಯಕ್ಕೆ ಒಲಿಂಪಿಕ್ಸ್‌ ಮರಳಿದಂತಾಗುತ್ತದೆ. 2000ದ ಒಲಿಂಪಿಕ್ಸ್‌ ಕೂಟವನ್ನು ಸಿಡ್ನಿಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಜಾಗತಿಕ ಕ್ರೀಡಾಕೂಟದ ಆತಿಥ್ಯ ವಹಿಸಿದ ಆಸ್ಟ್ರೇಲಿಯದ ಮತ್ತೂಂದು ನಗರವೆಂದರೆ ಮೆಲ್ಬರ್ನ್ (1956). ಮುಂದಿನೆರಡು ಒಲಿಂಪಿಕ್ಸ್‌ ಕ್ರಮವಾಗಿ ಪ್ಯಾರಿಸ್‌ (2024) ಮತ್ತು ಲಾಸ್‌ ಏಂಜಲೀಸ್‌ನಲ್ಲಿ (2028) ನಡೆಯಲಿದೆ.

ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್‌ : ಉದ್ಘಾಟನೆಗೆ ಆರೇ ಅಧಿಕಾರಿಗಳಿಗೆ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next