ನವದೆಹಲಿ : ಸೊಂಕಿತರ ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಮೇ. 21) ಹೇಳಿದ್ದಾರೆ.
ವಾರಣಾಸಿಯ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಇಂದು(ಶುಕ್ರವಾರ, ಮೇ 21) ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದ ಪ್ರಧಾನಿ, ‘ಜಹಾ ಬಿಮರ್, ವಹಿ ಉಪಚಾರ್’ ಹೊಸ ಕೋವಿಡ್ ನಿರ್ವಹಣೆಯ ಮಂತ್ರವನ್ನು ಪಾಲಿಸುವಂತೆ ಸೂಚಿಸಿದ್ದಲ್ಲದೇ, ವೈದ್ಯರು ಕೈಗೊಂಡ ಉಪಕ್ರಮಗಳ ಬಗ್ಗೆ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಯವರಿಗೆ ಲಸಿಕೆ ಮೇಲೆ ನಂಬಿಕೆ ಇರಲಿಲ್ಲ, ಅದಕ್ಕೆ ಮೊದಲು ಮೋದಿ ಪಡೆದಿಲ್ಲ: ಡಿ.ಕೆ.ಶಿ
“ಕಂಟೈನ್ ಮೆಂಟ್ ವಲಯಗಳನ್ನು ರಚಿಸುವುದು ಮತ್ತು ಸೋಮಕಿತರ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ಉತ್ತಮ ಉಪಕ್ರಮ. “ಕಾಶಿ ಕವಾಚ್” ಎಂಬ ಟೆಲಿಮೆಡಿಸಿನ್ ಸೌಲಭ್ಯವನ್ನು ಒದಗಿಸಲು ವೈದ್ಯರು, ಲ್ಯಾಬ್ ಗಳು ಮತ್ತು ಇ-ಮಾರ್ಕೆಟಿಂಗ್ ಕಂಪನಿಗಳನ್ನು ಸೇರಿಸಿಕೊಳ್ಳುವುದು ಸಹ ಒಂದು ನವೀನ ಉಪಕ್ರಮವಾಗಿದೆ “ಎಂದು ಅವರು ಹೇಳಿದರು.
ಇನ್ನು, ಕೋವಿಡ್ 19 ಸೋಂಕಿನ ಈ ಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತರು ಹಾಗೂ ಎಎನ್ ಎಮ್ ಕಾರ್ಯಕರ್ತರು, ಆರೋಗ್ಯ ಅಧಿಕಾರಿಗಳು ಶ್ರಮ ಮೀರಿ ಕಾರ್ಯ ನಿರ್ವಹಿಸಿದ್ದಾರೆ. ಕೋವಿಡ್ 19 ಬಿಕ್ಕಟ್ಟಿನ ಎರಡನೇ ಅಲೆಯ ವಿರುದ್ಧ ಸಮರ್ಥವಾಗಿ ಹೋರಾಡಿದ್ದಕ್ಕಾಗಿ ವಾರಣಾಸಿಗೆ ಮೋದಿ ಭೇಷ್ ಎಂದಿದ್ದಾರೆ.
ಇದನ್ನೂ ಓದಿ : ಹಣ ವರ್ಗಾವಣೆ ಬೇಗ ಮಾಡಿಕೊಳ್ಳಿ ! ನಾಳೆಯಿಂದ ಬ್ಯಾಂಕಿನ ‘ಈ’ ಸೇವೆ ಇರುವುದಿಲ್ಲ !