Advertisement
ಆಜ್ರಿ ಗ್ರಾಮದ ಬೆಳ್ಳಾಲ – ಮೋರ್ಟು ಸಂಪರ್ಕಿಸುವ ಸೇತುವೆ, ಬೈಂದೂರಿನ ಕಲ್ಯಾಣಿR ಸೇತುವೆ, ಸಿದ್ದಾಪುರ ಸಮೀಪದ ಸೇತುವೆ ಕಾಮಗಾರಿಗಳು ಈಗಾಗಲೇ ಆರಂಭ ಗೊಂಡಿವೆ. ಇದರೊಂದಿಗೆ ಹೆಮ್ಮಾಡಿ – ಕೊಲ್ಲೂರು ದ್ವಿಪಥ ಕಾಮಗಾರಿಯು ಕೂಡ ಮತ್ತೆ ಚಾಲನೆ ಪಡೆದು ಕೊಂಡಿದೆ.
Related Articles
ಎಲ್ಲ ಕಡೆಗಳಲ್ಲಿ ಗುತ್ತಿಗೆದಾರರು ಕಾರ್ಮಿಕರಿಂದ ಕೆಲಸ ಮಾಡಿಸಲು ಮುಂದಾಗಿದ್ದರೂ ಕೂಡ ಜಲ್ಲಿ, ಮರಳು, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯದ ಸರಕು – ಸಾಮಗ್ರಿಗಳ ಕೊರತೆ ಕಂಡು ಬರುತ್ತಿದೆ. ಅದರಲ್ಲೂ ಬಹುತೇಕ ಅಂಗಡಿಗಳಲ್ಲಿ ಸಿಮೆಂಟ್ ದಾಸ್ತಾನು ಖಾಲಿಯಾಗಿದ್ದು, ಹೊಸದಾಗಿ ಬೇರೆಡೆಗಳಿಂದ ಇನ್ನಷ್ಟೇ ಬರಬೇಕಿದೆ.
Advertisement
ಮತ್ತೆ ಕೆಲವರಿಗೆ ಕಾರ್ಮಿಕರೆಲ್ಲ ಊರಿಗೆ ಹೋಗಿರುವುದು ಕೂಡ ಸಮಸ್ಯೆಯಾಗಿದೆ. ಲಭ್ಯವಿರುವ ದಾಸ್ತಾನುಗಳು ದುಬಾರಿ ಯಾಗಿರುವುದು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.
ಕಾಮಗಾರಿ ಆರಂಭಕ್ಕೆ ಸೂಚನೆಈಗಾಗಲೇ ಬೆಳ್ಳಾಲ, ಕಲ್ಯಾಣಿR ಸೇರಿದಂತೆ ಕೆಲ ಸೇತುವೆ ಕಾಮಗಾರಿ ಗಳು ಆರಂಭಗೊಂಡಿವೆ. ಮಳೆಗಾಲಕ್ಕೂ ಮುನ್ನ ಸಾಧ್ಯವಾದಷ್ಟು ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕೊರತೆಯಿದ್ದ ಸೀಮೆಂಟ್, ಕಬ್ಬಿಣ, ಜಲ್ಲಿಗಳನ್ನು ಬೇರೆ ಕಡೆಗಳಿಂದ ತರಿಸಲಾಗಿದೆ. ಆರಂಭಗೊಂಡ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಜನ ಸಂಚಾರಕ್ಕೆ ಅನುವು ಮಾಡಿಕೊಡಲು ಎಲ್ಲ ಪ್ರಯತ್ನ ನಡೆಯುತ್ತಿದೆ.
-ದುರ್ಗಾದಾಸ್,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ