ಸಿರುಗುಪ್ಪ: ತಾಲೂಕಿನ ಹಾಗಲೂರು ಗ್ರಾಮದ ಹತ್ತಿರ ಹರಿಯುತ್ತಿರುವ ಕೆಂಚಿಹಳ್ಳಕ್ಕೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಶುಕ್ರವಾರ ರಾತ್ರಿ ಸುರಿದ ರಭಸದ ಮಳೆಗೆ ಕೊಚ್ಚಿಕೊಡು ಹೋಗಿದ್ದು,ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಕೆಂಚಿಹಳ್ಳಕ್ಕೆ ಸುಮಾರು 50 ವರ್ಷಗಳಹಿಂದೆಕಟ್ಟಲಾದಈನೆಲಮಟ್ಟದ ಸೇತುವೆಯಲ್ಲಿ ಮಳೆ ಬಂದರೆ ಸಾಕು ನೀರು ರಭಸವಾಗಿ
ಹರಿಯುತ್ತಿತ್ತು. ಗ್ರಾಮಸ್ಥರು ಸೇತುವೆ ಮೇಲೆ ಹರಿಯುವ ಮಳೆ ನೀರಿನಲ್ಲಿಯೇ ಹರಸಾಹಸಪಟ್ಟು ಸಂಚರಿಸುತ್ತಿದ್ದರು.
ನೆಲಮಟ್ಟದ ಸೇತುವೆ ತೆಗೆದು ಹೊಸ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಅನೇಕ ವರ್ಷಗಳಿಂದ ಜನಪ್ರತಿನಿಧಿಗಳ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದರು ಜನರ ಮನವಿಗೆ ಸ್ಪಂದಿಸಿದ ಶಾಸಕ ಎಂ.ಎಸ್. ಸೋಮಲಿಂಗಪ್ಪ ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯಕ್ಕೆಭೂಮಿಪೂಜೆ ನೆರವೇರಿಸಿ ಸೇತುವೆ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಹೊಸ ಸೇತುವೆ ಕಾಮಗಾರಿ ಆರಂಭವಾಗಿದ್ದು, ಪೂರ್ಣವಾಗಿಲ್ಲ. ಸಾರ್ವಜನಿಕರ ಸಂಚಾರಕ್ಕಾಗಿ ಹೊಸ ಸೇತುವೆ ನಿರ್ಮಿಸುವ ಸ್ಥಳದ ಪಕ್ಕದಲ್ಲೇ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದರು. ಆದರೆ ಕೆಂಚಿಹಳ್ಳದ ಮೇಲ್ಭಾಗದಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿದ್ದರಿಂದ ಪ್ರವಾಹದ ನೀರು ಹೆಚ್ಚಾಗಿ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.
ಇದನ್ನೂ ಓದಿ:ಪಾಕಿಸ್ಥಾನದ ಕ್ವೆಟ್ಟಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಮೂವರು ಸಾವು, 20 ಮಂದಿಗೆ ಗಾಯ
ಹೊಸ ಸೇತುವೆ ನಿರ್ಮಾಣ ಕಾರ್ಯ ಶೀಘ್ರವೇ ಮುಗಿಸಿದರೆ ಮಳೆಗಾಲದಲ್ಲಿ ಸಂಚಾರಕ್ಕೆ ಅನುಕೂಲವಾಗಲಿದೆ. ಅಧಿಕಾರಿಗಳು, ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕೆಂದು ಹಾಗಲೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜನ ಸಂಚಾರಕ್ಕೆ ತಾತ್ಕಾಲಿಕ ಸೇತುವೆ ದುರಸ್ತಿಗೊಳಿಸಲಾಗುವುದು. ಹೊಸ ಸೇತುವೆ ನಿರ್ಮಾಣಕಾರ್ಯವನ್ನು ಶೀಘ್ರ ಮುಗಿಸಿಕೊಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ.
-ಮುತ್ತಯ್ಯ, ಎಇಇ
ಲೋಕೋಪಯೋಗಿ ಇಲಾಖೆ