Advertisement

ಮದುವೆ ರದ್ದತಿ ವಿರುದ್ಧ ವಧುಗಳ ಆಕ್ರೋಶ

12:32 PM Jul 09, 2020 | mahesh |

ರೋಮ್‌: ವಿದೇಶಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್‌ ನಿಯಮಗಳಿಂದ ಜೀವನೋಪಾಯಕ್ಕಾಗಿ ಕಷ್ಟಸಾಧ್ಯವಾಗಿದ್ದು, ದೇಶಾದ್ಯಂತ ಜಾರಿ ಇರುವ ಲಾಕ್‌ಡೌನ್‌ ನಿಯಮಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಭಟನೆ ನಡೆದಿವೆ. ಆದರೆ ದೂರಾದ ಇಟಲಿಯ ರೋಮ್‌ ರಾಜ್ಯದಲ್ಲಿ ಸರಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆದಿದ್ದು, ಅಲ್ಲಿನ ವಧುಗಳು ಲಾಕ್‌ಡೌನ್‌ ನಿರ್ಬಂಧ ವಿರುದ್ಧ ಹುಸಿಮುನಿಸು ತೋರಿಸಿದ್ದಾರೆ.

Advertisement

ಮದುವೆ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಕೊಡದ ಕಾರಣಕ್ಕೆ ಕೋಪಗೊಂಡ ಮಹಿಳೆಯರು ಗುಂಪುಗಟ್ಟಿ ಅದ್ದೂರಿ ವಿವಾಹದ ಉಡುಗೆ ಧರಿಸಿ, ದೇಶದಲ್ಲಿ ಜಾರಿ ಇರುವ ಲಾಕ್‌ಡೌನ್‌ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.  ಸೋಂಕು ಹರಡುವುದನ್ನು ತಡೆಗಟ್ಟಲು ಇಟಲಿಯಲ್ಲಿ ಎರಡು ತಿಂಗಳು ವಿವಾಹ ಮಹೋತ್ಸವ ಸೇರಿದಂತೆ ಅನಗತ್ಯ ವ್ಯವಹಾರಗಳು ಮತ್ತು ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಅತಿಥಿಗಳ ಸಂಖ್ಯೆಯನ್ನು ಕೇವಲ ಇಬ್ಬರಿಗೆ ಸೀಮಿತಗೊಳಿಸಲಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 15ಮಂದಿ ಮಹಿಳೆಯರು ಬಿಳಿ ಮಾಸ್ಕ್ ಮತ್ತು ಬಿಳಿ ನಿಲುವಂಗಿಗಳನ್ನು (ಗೌನ್‌) ಧರಿಸಿ, ಕೈಯಲ್ಲಿ ಪ್ರತಿಭಟನೆ ಫಲಕಗಳನ್ನು ಹಿಡಿದು ಟ್ರೆವಿ ಕಾರಂಜಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಇಟಲಿಯ ವಿವಾಹ ಸಂಘಟನೆ ಅವಿವಾಹಿತರ ಹಠಾತ್‌ ಪ್ರತಿಭಟನೆ ಎಂಬ ಹೆಸರಿನಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಿದ್ದು,. “ನಿರ್ಬಂಧಗಳಿಲ್ಲದ ವಿವಾಹಗಳು’, “ನೀವು ನಮ್ಮ ಮದುವೆಗಳನ್ನು ಮುರಿದಿದ್ದೀರಿ’, “ಮದುವೆಗಳಿಗೆ ಚರ್ಚ್‌ ಬಾಗಿಲುಗಳನ್ನು ಮುಚ್ಚಲಾಗಿದೆ’ ಎಂಬ ಸಂದೇಶಗಳಿರುವ ಫಲಕಗಳನ್ನು ಹಿಡಿದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next