Advertisement

ಉಗ್ರರ ವಿರುದ್ಧ ಹೋರಾಡಿ ಬ್ರಿಕ್ಸ್‌ ನಾಯಕರಿಗೆ ಸಲಹೆ

08:10 AM Sep 04, 2017 | Harsha Rao |

ಕ್ಸಿಯಾಮೆನ್‌ (ಚೀನ): ವಿಶ್ವಕ್ಕೆ ಪಿಡುಗಾಗಿರುವ ಭಯೋತ್ಪಾದನೆ ವಿರುದ್ಧ ಬ್ರಿಕ್ಸ್‌ ರಾಷ್ಟ್ರಗಳು ಸಮಗ್ರ ನಿಲುವು ತಳೆಯಬೇಕು. ಅದನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ರಾಷ್ಟ್ರಗಳಿಗೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮನವಿ ಮಾಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. ಉಗ್ರರಿಗೆ ರಕ್ಷಣೆ ಎನಿಸುವಂಥ ಯಾವುದೇ ಸ್ಥಳವೇ ಇರಬಾರದು. ಅದಕ್ಕೆ ಅವಕಾಶ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಉಗ್ರರಿಗೆ ಪೋಷಣೆ ನೀಡುವ ಪಾಕಿಸ್ತಾನದ ಬಗ್ಗೆ ಮೃಧು ಧೋರಣೆ ಅನುಸರಿ ಸುತ್ತಿರುವ ಚೀನ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ ಬೆನ್ನಲ್ಲೇ ಜಿನ್‌ಪಿಂಗ್‌ ಈ ಮಾತುಗಳನ್ನಾಡಿದ್ದಾರೆ.

Advertisement

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಲಿದ್ದಾರೆ. ಜತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಸರಕಾರಿ ಮುಖ್ಯಸ್ಥರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next