Advertisement

ಸಂಸತ್‌ ಒಪ್ಪಿಗೆ ಇಲ್ಲದೆ ಬ್ರೆಕ್ಸಿಟ್‌ ಅಸಾಧ್ಯ

01:29 AM Jan 25, 2017 | Team Udayavani |

ಲಂಡನ್‌: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಮುನ್ನ ಯುಕೆ ಸಂಸತ್ತಿನಿಂದ ಔಪಚಾರಿಕ ಅನುಮೋದನೆ ಪಡೆಯಬೇಕು ಎಂದು ಅಲ್ಲಿನ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಯುಕೆಯ ಉನ್ನತ ನ್ಯಾಯಮಂಡಳಿ ಸರ್ಕಾರದ ವಾದವನ್ನು ತಳ್ಳಿಹಾಕಿದ್ದು, ಈ ಆದೇಶದಿಂದ ಪ್ರಧಾನಿ ಥೆರೇಸಾ ಮೇ ಅವರಿಗೆ ದೊಡ್ಡ ಹಿನ್ನಡೆ ಆದಂತಾಗಿದೆ. ಜನಮತಗಣನೆಯನ್ನೇ ಆಧರಿಸಿ ಪ್ರಧಾನಿ ತೆರೇಸಾ ಮೇ ಸರ್ಕಾರ ಐರೋಪ್ಯ ಒಕ್ಕೂಟದಿಂದ ಹೊರಬರಲು ಯೋಜನೆ ರೂಪಿಸಿತ್ತು. ಈ ಸಂಬಂಧ ತೆರೇಸಾ ಅವರ ನೀತಿಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌, ‘ಜನಮತಗಣನೆ ಎನ್ನುವುದು ರಾಜಕಾರಣದ ಮಹತ್ವದ ನಿರ್ಧಾರವೇ ಇದ್ದಿರಬಹುದು. ಆದರೆ, ಸಂಸತ್ತಿನ ನೀತಿ ಅನ್ವಯ ಸಾಧಕಬಾಧಕಗಳನ್ನು ಚರ್ಚಿಸಲೇಬೇಕಾಗುತ್ತದೆ. ಅಗತ್ಯ ಬದಲಾವಣೆ ಬೇಕಿದ್ದಲ್ಲಿ ಯುಕೆ ಸಂವಿಧಾನದ ಮೂಲಕವೇ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಸರ್ಕಾರ ತಡಮಾಡದೆ, ಮಾರ್ಚ್‌ ಅಂತ್ಯದೊಳಗೆ ಸರ್ಕಾರ ಅನುಮೋದನೆ ಪಡೆಯಬೇಕು’ ಎಂದು ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next