Advertisement

2024ರ ಒಲಿಂಪಿಕ್ಸ್ ನಲ್ಲಿ ಬ್ರೇಕ್‌ಡಾನ್ಸ್‌ ಒಂದು ಕ್ರೀಡೆ!

10:17 AM Dec 09, 2020 | Mithun PG |

ಜಿನೇವ: ಜಗದ್‌ವಿಖ್ಯಾತ ಬ್ರೇಕ್‌ಡಾನ್ಸ್‌ ತಾರೆ ಮೈಕೆಲ್‌ ಜಾಕ್ಸನ್‌ ಹೆಸರು ಯಾರಿಗೆ ಗೊತ್ತಿಲ್ಲ? ಚಿತ್ರವಿಚಿತ್ರವಾಗಿ ಹೆಜ್ಜೆಗಳನ್ನು ಹಾಕುತ್ತಆತ ವಿಶ್ವವನ್ನೇ ದಂಗುಬಡಿಸಿದ್ದರು. ಆ ನರ್ತನವೀಗ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಾಗಿ ಸೇರ್ಪಡೆಗೊಳ್ಳುತ್ತಿದೆ.

Advertisement

2024ರಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅದು ಪದಾರ್ಪಣೆ ಮಾಡಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಸಿ)ಯ ಉದ್ದೇಶವೂ ಸ್ಪಷ್ಟ. ನಗರಭಾಗದ ಯುವಕರನ್ನುಒಲಿಂಪಿಕ್ಸ್‌ಗೆ ಭಾರೀ ಪ್ರಮಾಣದಲ್ಲಿ ಸೆಳೆಯಬೇಕೆಂಬ ಯೋಚನೆಯನ್ನುಹೊಂದಿದೆ.

ಪ್ರಸ್ತುತ ಒಲಿಂಪಿಕ್ಸ್‌ ವಿಶ್ವದಲ್ಲೇ ಬೃಹತ್‌ ಬಹು ಕ್ರೀಡಾಕೂಟ ಎನಿಸಿದ್ದರೂ,ಫ‌ುಟ್‌ಬಾಲ್‌,ಕ್ರಿಕೆಟ್‌ ವಿಶ್ವಕಪ್‌ ಗಳಿಗೆ ಹೋಲಿಸಿದರೆ ಜನಪ್ರಿಯತೆ ಸ್ವಲ್ಪ ಕಡಿಮೆಯೇ. ಅದನ್ನು ತುಂಬಲು ಐಒಸಿ ಬೇರೆ ಬೇರೆ ಯೋಚನೆ ಮಾಡಿದೆ. ಇನ್ನು ಸ್ಕೇಟಿಂಗ್‌, ಆರೋಹಣ (ಕೃತಕ ಪರ್ವತಾರೋಹಣ),ಸರ್ಫಿಂಗ್‌ (ನೀರಿನ ಭಾರೀ ಅಲೆಗಳಮೇಲೆ ಚಲಿಸುವುದು) ಇವೂ ಪ್ಯಾರಿಸ್‌ ನಲ್ಲಿ ಕ್ರೀಡೆಯಾಗಿ ಸೇರ್ಪಡೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next