Advertisement
ಲಾಕ್‌ಡೌನ್ ತೆರವುಗೊಳಿಸಬೇಕೆಂದು ಆಗ್ರಹಿಸಿ ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೊಲ್ಸನಾರೊ ಬೆಂಬಲಿಸುತ್ತಿರುವುದು ಮಾತ್ರವಲ್ಲದೆ ಕೆಲವು ಪ್ರತಿಭಟನೆಗಳಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಸ್ವತಃ ಭಾಗವಹಿಸುತ್ತಿದ್ದಾರೆ.
ಜನಪ್ರಿಯತೆಗಾಗಿ ಹಪಾಹಪಿಸುತ್ತಿರುವ ಬೊಲ್ಸನಾರೊ ಆರಂಭದಿಂದಲೇ ಕೋವಿಡ್ ಕುರಿತಾಗಿ ನಿರ್ಲಕ್ಷ್ಯದ ಧೋರಣೆ ತಾಳಿದ್ದರು. ಇದರಿಂದಾಗಿಯೇ ವೈರಸ್ ಬ್ರಜಿಲ್‌ನಲ್ಲಿ ಅತ್ಯಧಿಕ ಹಾನಿಯುಂಟು ಮಾಡಿದೆ. ಪ್ರತಿಭಟನೆ ರ್ಯಾಲಿಗಳಲ್ಲಿ ಬೊಲ್ಸನಾರೊ ಭಾಗವಹಿಸುತ್ತಿರುವುದು ಈಗ ನಿತ್ಯದ ಸುದ್ದಿಯಾಗಿದೆ.
Related Articles
Advertisement
ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ಶೇ. 60 ಮಂದಿ ಅದನ್ನು ಪಾಲಿಸಿದ ಪರಿಣಾಮವಾಗಿ ವೈರಸ್ ಹರಡುವ ವೇಗ ಕಡಿಮೆಯಿತ್ತು. ಆದರೆ ಕಳೆದ ಕೆಲ ವಾರಗಳಿಂದ ಲಾಕ್‌ಡೌನ್ ಪಾಲಿಸುವವರ ಪ್ರಮಾಣ ಶೇ.50ರಿಂದಲೂ ಕೆಳಗಿಳಿದಿದೆ ಹಾಗೂ ಇದೇ ವೇಳೆ ವೈರಸ್ ಹರಡುವ ವೇಗವೂ ಹೆಚ್ಚಾಗಿದೆ.
ಪರಿಸ್ಥಿತಿ ಹೀಗಿದ್ದರೂ ಬೊಲ್ಸನಾರೊ ಈಗಲೂ ಕೋವಿಡ್ ಅನ್ನು ಒಂದು ಸಾಮಾನ್ಯ ಜ್ವರ ಎಂದೇ ಕರೆಯುತ್ತಿದ್ದಾರೆ. ಬ್ರಜಿಲ್‌ನಲ್ಲಿ ಕೋವಿಡ್ ಒಂದಿಷ್ಟಾದರೂ ನಿಯಂತ್ರಣದಲ್ಲಿದ್ದರೆ ಅದು ಆಯಾಯ ರಾಜ್ಯಗಳ ಮೇಯರ್‌ಗಳ ಪ್ರಯತ್ನದಿಂದ ಮಾತ್ರ. ಇದಕ್ಕೆ ತದ್ವಿರುದ್ಧವಾಗಿ ಅಧ್ಯಕ್ಷ ಬೊಲ್ಸನಾರೊ ಲಾಕ್‌ಡೌನ್‌ಗಿಂತ ದೇಶದ ಆರ್ಥಿಕತೆ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದಾರೆ.
ಲಾಕ್‌ಡೌನ್ ವಿರುದ್ಧ ನಡೆಯುತ್ತಿರುವ ರ್ಯಾಲಿಗಳಲ್ಲಿ ಭಾಗವಹಿಸುವ ಮೂಲಕ ಬೊಲ್ಸನಾರೊ ಲಕ್ಷಾಂತರ ಜನರ ಪ್ರಾಣಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಇಂಥ ರ್ಯಾಲಿಗಳಲ್ಲಿ ಅವರ ಬೆಂಬಲಿಗರು , ಸಮರ್ಥಕರು ಒಟ್ಟುಗೂಡುವುದು ಸಾಮಾನ್ಯ.