Advertisement

ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಯುವಕನ ಅಂಗಾಂಗ ದಾನ

01:03 AM Dec 30, 2021 | Team Udayavani |

ಮಂಗಳೂರು: ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಮೂರ್ಜೆ ಬಳಿಯ ಇರ್ವತ್ತೂರು ಗ್ರಾಮದ ಮಣ್ಣೂರು ನಿವಾಸಿ ಸತೀಶ್‌ (32) ಅವರ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬದ ಸದಸ್ಯರು ನಾಲ್ಕು ಮಂದಿಯ ಜೀವನಕ್ಕೆ ಬೆಳಕಾಗಿದ್ದಾರೆ. ರಸ್ತೆ ಅಪಘಾತ, ಅಂಗಾಂಗ ದಾನ,ಸತೀಶ್‌

Advertisement

ಪುಂಜಾಲಕಟ್ಟೆ ಬಳಿ ರವಿವಾರ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತವೊಂದರಲ್ಲಿ ಸತೀಶ್‌ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಮಂಗಳವಾರ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಅಂಗಾಂಗ ದಾನಕ್ಕೆ ನಿರ್ಧರಿಸಿದರು.

ಬುಧವಾರ ಬೆಳಗ್ಗೆ ಅಂಗಾಂಗ ದಾನದ ವಿವಿಧ ಪ್ರಕ್ರಿಯೆಗಳ ಬಳಿಕ ಹೃದಯವನ್ನು ಬೆಂಗಳೂರು ಮಣಿಪಾಲ್‌ ಆಸ್ಪತ್ರೆಗೆ, ಲಿವರ್‌ ಅನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರವಾನಿಸಲಾಯಿತು. ಬೆಳಗ್ಗೆ 11.30ರ ಸುಮಾರಿಗೆ ಹೃದಯ ಮತ್ತು ಲಿವರ್‌ ಹೊತ್ತ ಆ್ಯಂಬುಲೆನ್ಸ್‌ ಝೀರೊ ಟ್ರಾಫಿಕ್‌ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿತು. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ರವಾನೆಗೊಂಡಿತು.

ಒಂದು ಕಿಡ್ನಿಯನ್ನು ಉಡುಪಿ ಮಣಿಪಾಲ್‌ ಆಸ್ಪತ್ರೆಗೂ ಇನ್ನೊಂದು ಕಿಡ್ನಿಯನ್ನು ಮಂಗಳೂರಿನ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಗ್ರೀನ್‌ ಕಾರಿಡಾರ್‌ ವ್ಯವಸ್ಥೆಯಲ್ಲಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ರವಾನಿಸಲಾಯಿತು.
ಫಾದರ್‌ ಮುಲ್ಲರ್‌ ಸಂಸ್ಥೆಗಳ ನಿದೇಶಕ ವಂ| ರಿಚಾರ್ಡ್‌ ಕುವೆಲ್ಲೊ, ಆಡಳಿತಾಧಿಕಾರಿ ವಂ| ಅಜಿತ್‌ ಮಿನೇಜಸ್‌, ವೈದ್ಯಕೀಯ ಅಧೀಕ್ಷಕ ಡಾ| ಉದಯ ಕುಮಾರ್‌, ಪಿಆರ್‌ಒ ಡಾ| ಕೆಲ್ವಿನ್‌ ಪಾಯಸ್‌, ಎಸಿಪಿ ನಟರಾಜ್‌ ಸಹಕರಿಸಿದರು.

ಇದನ್ನೂ ಓದಿ:ಆ್ಯಪಲ್‌ ಸಂಸ್ಥೆಯಿಂದ ಭರ್ಜರಿ ಬೋನಸ್‌ !

Advertisement

ನಾಲ್ವರ ಬಾಳಿಗೆ ಬೆಳಕಾಗಲಿ
ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ಆತನ ಅಂಗಾಂಗಗಳಾದರೂ ನಾಲ್ಕು ಜನರ ಬಾಳಿಗೆ ಬೆಳಕಾಗಲಿ ಎಂದು ಈ ನಿರ್ಧಾರ ಮಾಡಿದ್ದೇವೆ ಎಂದು ಸತೀಶ್‌ ಅವರ ತಂದೆ ಜಾರಪ್ಪ ಹಾಗೂ ಮಾವ ವಿಠಲ ಪ್ರತಿಕ್ರಿಯೆ ನೀಡಿದ್ದಾರೆ.
ತಂದೆ ಜಾರಪ್ಪ ಟೆಂಪೊ ಚಾಲಕ ಹಾಗೂ ತಾಯಿ ಗೃಹಿಣಿ ಆಗಿದ್ದು, ದಂಪತಿಗೆ ಮೂವರು ಮಕ್ಕಳು. ಸತೀಶ್‌ ಏಕೈಕ ಪುತ್ರ. ಉಳಿದಿಬ್ಬರು ಪುತ್ರಿಯರು. ಸತೀಶ್‌ ಕೂಲಿ ಕೆಲಸ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next