Advertisement

ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ಸಕ್ಸಸ್‌

11:22 PM Dec 29, 2022 | Team Udayavani |

ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷೆಯನ್ನು ಗುರುವಾರ ಯಶಸ್ವಿಯಾಗಿ ನಡೆಸಿದೆ.

Advertisement

ಐಎಎಫ್ ನ ಎಸ್‌ಯು-30 ಎಂಕೆಐ ಯುದ್ಧ ವಿಮಾನದಿಂದ ಶತ್ರು ರಾಷ್ಟ್ರದ ಯುದ್ಧ ನೌಕೆಯನ್ನು ಧ್ವಂಸ ಮಾಡುವ ಪರೀಕ್ಷೆಯನ್ನು ಬ್ರಹ್ಮೋಸ್‌ ಕ್ಷಿಪಣಿಯ ವಿಸ್ತೃತ ಆವತ್ತಿಯ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಐಎಎಫ್ ವತಿಯಿಂದ ನೋಡುವುದಿದ್ದರೆ ಇದೊಂದು ಬಹುದೊಡ್ಡ ಸಾಧನೆಯೇ. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಭೂಮಿ ಮತ್ತು ಜಲದಲ್ಲಿ ಇರುವ ಶತ್ರುವಿನ ನೆಲೆ ಹಾಗೂ ಹಡಗನ್ನು ಧ್ವಂಸಗೊಳಿಸುವ ಪರೀಕ್ಷೆ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next