Advertisement

ಬ್ರಹ್ಮರಕೂಟ್ಲು ಟೋಲ್‌ ಪ್ಲಾಜಾ: ಹೆದ್ದಾರಿ ವಿಸ್ತರಣೆಯಲ್ಲಿ ಡಾಮರು ಕಾಮಗಾರಿ

10:40 PM Mar 16, 2021 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೂಟ್ಲು ಟೋಲ್‌ ಪ್ಲಾಜಾದಲ್ಲಿ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಮೂರನೇ ಬೂತ್‌ ನಿರ್ಮಾಣದ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ವಿಸ್ತರಿಸುವ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ ಅಂತಿಮ ಹಂತದಲ್ಲಿ ಡಾಮರು ಹಾಕುವ ಕಾಮಗಾರಿ ನಡೆಯುತ್ತಿದೆ.

Advertisement

ಕಳೆದ ಹಲವು ಸಮಯಗಳಿಂದ ಮೂರನೇ ಬೂತ್‌ ನಿರ್ಮಾಣವಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದರೂ, ಕಾಮಗಾರಿ ಬಹಳ ವಿಳಂಬವಾಗಿತ್ತು. ಪ್ರಾರಂಭದಲ್ಲಿ ವಿದ್ಯುತ್‌ ಲೈನ್‌ ಅಡ್ಡಿಯಾಗಿದ್ದು, ಅದನ್ನು ತೆರವುಗೊಳಿಸಿದ ಬಳಿಕವೂ ಕಾಮಗಾರಿ ಮುಂದುವರಿದಿರಲಿಲ್ಲ.

ಪ್ರಸ್ತುತ ಟೋಲ್‌ಗೇಟ್‌ನ ಎರಡೂ ಬದಿಗಳಲ್ಲಿ ತಲಾ ಎರಡೆರಡು ಬೂತ್‌ಗಳಿದ್ದು, ಆದರೂ ಶುಲ್ಕ ಪಾವತಿಯ ವೇಳೆ ವಾಹನಗಳು ಸರತಿಯಲ್ಲಿ ನಿಲ್ಲಬೇಕಿತ್ತು. ಹೀಗಾಗಿ ಮೂರನೇ ಬೂತ್‌ಗೆ ಬೇಡಿಕೆ ಕೇಳಿಬಂದಿತ್ತು. ಪ್ರಸ್ತುತ ಹೆದ್ದಾರಿ ವಿಸ್ತರಣೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬಳಿಕ ಮೂರನೇ ಬೂತ್‌ ನಿರ್ಮಾಣವಾಗಬೇಕಿದೆ.

ಡಿವೈಡರ್‌ಗೆ ಬಣ್ಣ
ಜತೆಗೆ ಬ್ರಹ್ಮರಕೂಟ್ಲು ಟೋಲ್‌ ಬಳಿಯಿಂದ ಮಂಗಳೂರು ಭಾಗಕ್ಕೆ ಹೆದ್ದಾರಿಯ ಡಿವೈಡರ್‌ಗಳಿಗೆ ಕಪ್ಪು ಹಾಗೂ ಹಳದಿ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಈ ಹಿಂದೆ ಬಳಿದ ಬಣ್ಣವು ಮಣ್ಣಿನಿಂದ ತುಂಬಿ ಮಾಸಿ ಹೋಗಿದ್ದು, ಪ್ರಸ್ತುತ ಡಿವೈಡರ್‌ನ ಮಣ್ಣು ತೆಗೆದು ಯಂತ್ರದ ಮೂಲಕ ಬಣ್ಣ ಬಳಿಯಲಾಗುತ್ತಿದೆ. ಡಿವೈಡರ್‌ನ ಗಿಡಗಂಟಿಗಳನ್ನು ಕೂಡ ತೆರವುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next