Advertisement
ಇದು ಟಿ20 ಪಂದ್ಯದ ಅಂತಿಮ ಓವರಿನಲ್ಲಿ ದಾಖಲಾದ ಮೂರನೇ ಗರಿಷ್ಠ ಮೊತ್ತವಾಗಿದೆ. 2015ರಲ್ಲಿ ಕೆಂಟ್ ವಿರುದ್ಧ ಸೋಮರ್ಸೆಟ್ 34 ರನ್ ಸಿಡಿಸಿರುವುದು ಗರಿಷ್ಠ ಮೊತ್ತವಾಗಿದ್ದರೆ 2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತಾ ನೈಟ್‌ರೈಡರ್ 31 ರನ್ ಹೊಡೆದಿರುವುದು ಎರಟನೇ ಗರಿಷ್ಠ ಮೊತ್ತವಾಗಿದೆ.
ಗೆಲ್ಲಲು 198 ರನ್ ಗಳಿಸುವ ಗುರಿ ಪಡೆದಿದ್ದ ರಂಗಪುರ ತಂಡವು ಅಂತಿಮ ಓವರಿನಲ್ಲಿ 26 ರನ್ ಗಳಿಸಬೇಕಿತ್ತು. 19ನೇ ಓವರಿನಲ್ಲಿ ತಂಡ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಾಗ ಆಘಾತ ಅನುಭವಿಸಿತ್ತು. ತಂಡದ ಅಜೇಯ ಓಟಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ನುರುಲ್ ಅವರು ಕೈಲ್ ಮೇಯರ್ ಎಸೆದ ಅಂತಿಮ ಓವರಿನ ಮೊದಲ ಐದು ಎಸೆತಗಳಲ್ಲಿ ಅನುಕ್ರಮವಾಗಿ 6, 4, 4, 6 ಮತ್ತು 4 ರನ್ ಸಿಡಿಸಿ ತಂಡದ ಗೆಲುವು ಖಚಿತಪಡಿಸಿದ್ದರು. ಅಂತಿಮ ಎಸೆತದಲ್ಲಿ ಗೆಲುವಿಗೆ ಎರಡು ರನ್ ಬೇಕಿತ್ತು. ಆದರೆ ನುರುಲ್ ಸಿಕ್ಸರ್ ಬಾರಿಸಿ ಭರ್ಜರಿಯಾಗಿ ತಂಡದ ಗೆಲುವನ್ನು ಸಾರಿದರು. ಇದರಿಂದ ತಂಡ ತನ್ನ ಗೆಲುವಿನ ಓಟವನ್ನು ಆರಕ್ಕೇರಿಸಿತು.