Advertisement

ಏರ್‌ ಆ್ಯಂಬುಲೆನ್ಸ್‌ನಲ್ಲಿ ಕರೆತಂದು ಬಾಕ್ಸರ್‌ಗೆ ಚಿಕಿತ್ಸೆ!

12:50 PM Apr 22, 2020 | keerthan |

ನವದೆಹಲಿ: ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಬಾಕ್ಸರ್‌ ಡಿಂಗ್ಕೋ ಸಿಂಗ್  ಆರೋಗ್ಯ ಸ್ಥಿತಿ ಉಲ್ಬಣಿಸಿದೆ. ಪಿತ್ತ ಜನಕಾಂಗದ ಕ್ಯಾನ್ಸರ್‌ಗೆ ಸಿಲುಕಿ ಸಾವು ಬದುಕಿನ ನಡುವೆಹೋರಾಟ ನಡೆಸುತ್ತಿದ್ದಾರೆ. ಸದ್ಯ ಲಾಕ್ ಡೌನ್ ಇರುವ ಕಾರಣ ಇವರ ಚಿಕಿತ್ಸೆ ಕಷ್ಟವಾಗಿದೆ. ಹೀಗಾಗಿ ಸಿಂಗ್ ಅವರನ್ನು ಚಿಕಿತ್ಸೆಗಾಗಿ ಇಂಪಾಲ್‌ನಿಂದ ನವದೆಹಲಿಗೆ ಏರ್‌ ಆ್ಯಂಬುಲೆನ್ಸ್‌ ಮೂಲಕ ಕರೆತಂದು ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಭಾರತೀಯ ಬಾಕ್ಸಿಂಗ್‌ ಒಕ್ಕೂಟ (ಬಿಎಫ್ಐ) ತಿಳಿಸಿದೆ.

Advertisement

ಸದ್ಯ ಎಲ್ಲ ಕಡೆ ದಿಗ್ಬಂಧನ ಇರುವುದರಿಂದ ಡಿಂಗ್ಕೋ ಸಿಂಗ್  ಅವರ ಚಿಕಿತ್ಸೆಗೆ ಅಡ್ಡಿಯಾಗಿದೆ, ಕೇಂದ್ರ ಕ್ರೀಡಾ ಸಚಿವ ರಿಜಿಜು ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಸದ್ಯ ಬಾಕ್ಸರ್ ಸಿಂಗ್ ರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರಿಗೆ ರೇಡಿಯೇಶನ್ ಚಿಕಿತ್ಸೆ ಅಗತ್ಯವಾಗಿದೆ ಎನ್ನಲಾಗಿದೆ.

41 ವರ್ಷದ ಬಾಕ್ಸರ್ ಡಿಂಗ್ಕೋ ಸಿಂಗ್ ಇಂಫಾಲ್ ನಲ್ಲಿ ನೆಲೆಸಿದ್ದಾರೆ. 1998ರ ಬ್ಯಾಂಕಾಕ್ ಏಶ್ಯನ್ ಗೇಮ್ಸ್ ನಲ್ಲಿ ಇವರು ಚಿನ್ನದ ಪದಕ ಪಡೆದಿದ್ದರು. ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಗೂ ಭಾಜನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next