Advertisement

ಬಾಕ್ಸಿಂಗ್‌ ಡೇ ಟೆಸ್ಟ್‌ : ಅಲೆಕ್ಸ್‌ ಕ್ಯಾರಿ ಮೊದಲ ಸೆಂಚುರಿ

11:24 PM Dec 28, 2022 | Team Udayavani |

ಮೆಲ್ಬರ್ನ್: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ಬೃಹತ್‌ ಜಯಭೇರಿ ಮೊಳಗಿಸಲು ಸಿದ್ಧತೆ ನಡೆಸಿದೆ. ದಕ್ಷಿಣ ಆಫ್ರಿಕಾ ಸತತ 2ನೇ ಟೆಸ್ಟ್‌ನಲ್ಲೂ ಹೀನಾಯ ಸೋಲಿನತ್ತ ಮುಖ ಮಾಡಿದೆ.

Advertisement

386 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿರುವ ದಕ್ಷಿಣ ಆಫ್ರಿಕಾ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಈಗಾಗಲೇ ನಾಯಕ ಡೀನ್‌ ಎಲ್ಗರ್‌ (0) ಅವರ ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ. ಸ್ಕೋರ್‌ಬೋರ್ಡ್‌ ಕೇವಲ 15 ರನ್‌ ತೋರಿಸುತ್ತಿದೆ.

3 ವಿಕೆಟಿಗೆ 386 ರನ್‌ ಮಾಡಿದ್ದ ಆಸ್ಟ್ರೇಲಿಯ 3ನೇ ದಿನದಾಟದಲ್ಲೂ ರನ್‌ ಪ್ರವಾಹ ಹರಿಸಿತು. 8 ವಿಕೆಟಿಗೆ 575 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಬಾರಿಸಿದ ಚೊಚ್ಚಲ ಟೆಸ್ಟ್‌ ಶತಕ ಆಸೀಸ್‌ ಸರದಿಯ ಬುಧವಾರದ ಆಟದ ಆಕರ್ಷಣೆ ಆಗಿತ್ತು.

ವಾರ್ನರ್‌ 200ಕ್ಕೆ ಔಟ್‌
ದಿದನಾಟದ ಆರಂಭದಲ್ಲಿ ಮೇಲುಗೈ ಸಾಧಿಸಿದ್ದು ದಕ್ಷಿಣ ಆಫ್ರಿಕಾ ವೇಗಿ ಆ್ಯನ್ರಿಚ್‌ ನೋರ್ಜೆ. ಸ್ಕೋರ್‌ 395ಕ್ಕೆ ಏರಿದಾಗ ಅವರು ಅವಳಿ ಆಘಾತವಿಕ್ಕಿದರು. ಮೊದಲು ಟ್ರ್ಯಾವಿಸ್‌ ಹೆಡ್‌ (51), ಮರು ಎಸೆತದಲ್ಲೇ ಡೇವಿಡ್‌ ವಾರ್ನರ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದರು. 200 ರನ್‌ ಮಾಡಿದೊಡನೆಯೇ ಸ್ನಾಯು ಸೆಳೆತಕ್ಕೆ ಸಿಲುಕಿದ್ದ ವಾರ್ನರ್‌ ಮರಳಿ ಬ್ಯಾಟಿಂಗ್‌ಗೆ ಇಳಿದು ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದರು!

ಕ್ಯಾರಿ ಆಕರ್ಷಕ ಆಟ
ಅಲೆಕ್ಸ್‌ ಕ್ಯಾರಿ-ಕ್ಯಾಮರಾನ್‌ ಗ್ರೀನ್‌ ಮತ್ತೆ ಮೊತ್ತವನ್ನು ಬೆಳೆಸತೊಡಗಿದರು. 8ನೇ ವಿಕೆಟಿಗೆ 117 ರನ್‌ ಹರಿದು ಬಂತು. ಕ್ಯಾರಿ ತಮ್ಮ ಚೊಚ್ಚಲ ಟೆಸ್ಟ್‌ ಶತಕವನ್ನು 111ರ ತನಕ ವಿಸ್ತರಿಸಿದರು. 149 ಎಸೆತಗಳ ಈ ಆಟದಲ್ಲಿ 13 ಬೌಂಡರಿ ಒಳಗೊಂಡಿತ್ತು. ಗ್ರೀನ್‌ ಗಳಿಕೆ ಅಜೇಯ 51 ರನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next