Advertisement

ಬೊರಿವಲಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಒಡಿಯೂರು ಶ್ರೀಗಳ ಭೇಟಿ

04:20 PM Aug 05, 2018 | Team Udayavani |

ಮುಂಬಯಿ: ಧರ್ಮದ ಜ್ಞಾನದ  ಮೂಲಕ ನಾವು ಬದುಕಿ ಇನ್ನೊಬ್ಬರನ್ನು  ಬದುಕಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಭಜನೆಗೆ ಸಂಸ್ಕಾರ ನೀಡುವ ಶಕ್ತಿಯಿದೆ. ಭಜನೆ ಶೋಕಿಗಾಗಿ ಅಲ್ಲ. ಆತ್ಮ ಸಂತೋಷಕ್ಕಾಗಿ ಮಾಡಬೇಕು. ಭಜನೆಗೆ ಹೃದಯದ ಕಣ್ಣನ್ನು ಅರಳಿಸುವ ಶಕ್ತಿಯಿದೆ. ಗುರುಪರಂಪರೆಯ ಮಾರ್ಗದರ್ಶನ ಮನುಷ್ಯನನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ. ಮನುಷ್ಯನಿಗೆ ವಿಶ್ವಾಸ ನಂಬಿಕೆ ಮುಖ್ಯವೇ ಹೊರತು ಸಂಶಯ ಆತನನ್ನು ಅವನತಿಯತ್ತ ಕೊಂಡೊಯ್ಯುತ್ತದೆ. ಅಂಧಕಾರ ಎನ್ನುವುದು  ಬದುಕಿಗೆ ಅಪಾಯ. ಬದುಕಿನ ಒಳ ಹೊರಗಿನ ಸೆಳೆತವನ್ನು ದಾಸರು ಭಜನೆಯ ಮೂಲಕ ತಿಳಿಸಿ ಭಕ್ತರನ್ನು ಒಗ್ಗಟ್ಟಾಗಿಸಿದ್ದಾರೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

Advertisement

ಆ. 3 ರಂದು ಬೊರಿವಲಿ ಪಶ್ಚಿಮದ ಜೈರಾಜ್‌ ನಗರದ ಶ್ರೀ ಕ್ಷೇತ್ರ ಮಹಿಷಮರ್ದಿನಿ ದೇವಸಾœನಕ್ಕೆ ಭೇಟಿನೀಡಿ ಆಶೀರ್ವಚನ ನೀಡಿದ ಅವರು, ವಾಸ್ತವ ಮರೆತು ಕಲ್ಪನೆಯ ಬೆನ್ನು ಬಿಡದೆ ಅದರಿಂದ ಅನುಭವ ಪಡೆಯಲು ಸಾಧ್ಯ. ಹಿರಿಯರ ಆದರ್ಶ ಬದುಕನ್ನು ನಾವು ಜೀವಂತವಾಗಿರಿಸಿದ್ದೇವೆ. ದಾಸರ ಭಜನೆಯ ನಮಗೆ ಭಕ್ತಿ ಲೋಕಕ್ಕೆ ಹಾದಿಯಾಗಿದೆ. ಬದುಕಿನ ಕಷ್ಟವನ್ನು ನಿಲ್ಲಿಸುವಲ್ಲಿ ನಮ್ಮಲ್ಲಿ ತಾಳ್ಮೆ, ಸಹನೆ ಮುಖ್ಯ. ಕಷ್ಟ-ಸುಖವನ್ನು ಚಕ್ರದಂತೆ ಸ್ವೀಕರಿಸಿದಾಗ ಎಲ್ಲರ ಬದುಕಿನಲ್ಲಿ ಬದಲಾವಣೆ ಸಾಧ್ಯ. ಧರ್ಮದ ಈ ಚಾವಡಿಯಲ್ಲಿ ಉದಾರ ಮನಸ್ಸಿನ ಆಡಳಿತ ಮೊಕ್ತೇಸರರು, ಆಡಳಿತ ವರ್ಗದವರಿಂದ ಸಂಸ್ಕೃತಿ, ಕಲಾರಾಧನೆ, ಧಾರ್ಮಿಕತೆ ಇಲ್ಲಿ ವಿಶೇಷವಾಗಿ ಮೂಡಿ ಬಂದಿದೆ. ಮಹಿಷ ಮರ್ದಿನಿ ಗಣಪತಿ, ಆಂಜನೇಯ, ನಾಗದೇವರು, ಧರ್ಮದೈವ ಕೊಡಮಂತ್ತಾಯ ದೈವದ ಸಂಗಮ ಈ ದೇವಸ್ಥಾನದಲ್ಲಿ ಮೂಡಿ ಬಂದಿದ್ದು, ಪರಿಸರದ ಭಕ್ತರಿಗೆ ಶಾಂತಿ, ನೆಮ್ಮದಿ, ಅನುಗ್ರಹ ಸದಾ ದೊರೆಯಲಿ ಎಂದು ಶುಭಹಾರೈಸಿದರು.

ದೇವಸ್ಥಾನದ ಸ್ಥಾಪಕ ಮೊಕ್ತೇಸರ ವಂಶಸ್ಥರಾದ ಜಯರಾಮ ಶ್ರೀಧರ ಶೆಟ್ಟಿ ದಂಪತಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರರಾದ ಕಣಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ದಂಪತಿ, ಶ್ರೀಮತಿ ಜಯಪಾಲಿ ಅಶೋಕ್‌ ಶೆಟ್ಟಿ, ಗಣ್ಯರುಗಳಾದ ಉದ್ಯಮಿ ಶಿವರಾಮ ಶೆಟ್ಟಿ ದಂಪತಿ, ಅಸಂಖ್ಯಾತ ಭಕ್ತರ ಜಯಘೋಷದಲ್ಲಿ ಸ್ವಾಮೀಜಿಯವರನ್ನು ಹಾರಹಾಕಿ ಸ್ವಾಗತಿಸಿ, ಚೆಂಡೆ-ಮದ್ದಳೆ ಜಯಘೋಷದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ಶ್ರೀಗಳು ಪ್ರಾರಂಭದಲ್ಲಿ ಶ್ರೀ ಮಹಿಷಮರ್ದಿನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೊರಿವಲಿಯ ಹೊಟೇಲ್‌ ಉದ್ಯಮಿ, ಸಮಾಜ ಸೇವಕ ಶಿವರಾಮ ಶೆಟ್ಟಿ ದಂಪತಿ ಶ್ರೀಗಳ ಪಾದುಕಾ ಪೂಜೆಗೈದರು. ಸಾಧ್ವಿ ಮಾತಾನಂದಮಯಿ ಅವರು ಭಕ್ತಿಗೀತೆಯನ್ನು ಹಾಡಿದರು. ಗುರುದೇವ ಸೇವಾ ಬಳಗ ಮುಂಬಯಿ ಇದರ ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ದೈವಭಕ್ತರಾದ  ಶ್ರೀಧರ ಶೆಟ್ಟಿ ಅವರು ಧಾರ್ಮಿಕ ಚಿಂತನೆಯ ಮೂಲಕ ನೆಲೆಗೊಂಡ ಈ ಕ್ಷೇತ್ರ ಪರಿಸರದ ಜನರ ಭಕ್ತಿಯ ನೆಲೆಬೀಡಾಗಿ ಪ್ರಸಿದ್ಧಿ ಪಡೆದಿದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇವೆಯು ಈ ಪುಣ್ಯಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿ ರುವುದು ಅಭಿನಂದನೀಯ ಎಂದು ನುಡಿದು ವಂದಿಸಿದರು.  ಶ್ರೀಗಳು ಭಕ್ತಾದಿಗಳನ್ನು ಫಲಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.

ದೇವಸ್ಥಾನದ ಅರ್ಚಕ ವೃಂದದವರು ಹಾಗೂ ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ, ಶ್ರೀ ಮಹಿಷ ಮರ್ದಿನಿ ಭಜನ ಮಂಡಳಿಯವರ ಸಹಕಾರದೊಂದಿಗೆ ಕಾರ್ಯಕ್ರಮವು ಜರಗಿತು.  ಭಕ್ತಾದಿಗಳು, ತುಳು-ಕನ್ನಡಿಗರು, ಗುರುಭಕ್ತರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಗುರುಗಳ ಕೃಪೆಗೆ ಪಾತ್ರರಾದರು. 

Advertisement

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next