Advertisement

ಬೋರಿಂಗ್‌ ಕ್ಲಾಸ್‌

06:00 AM Jan 19, 2018 | |

ಯಾಕೋ ತುಂಬಾ ಬೋರ್‌ ಹೊಡೀತಾ ಇದೆ, ಇವತ್ತು ಕ್ಲಾಸ್‌ಬಂಕ್‌ ಹೊಡೀಲೇಬೇಕು ಅನ್ನೋದು ಸರ್ವಜನರ ವಾಂಛೆ. ಆದ್ರೂ ನಾಳೆದಿನ ಹಾಜರಾತಿ ಕೊರತೆ ಅಂತೆಲ್ಲ ಬಂದ್ರೆ ಕಷ್ಟ ಅಲ್ವಾ ಅಂತಿದ್ದ ಗುಂಪು ತರಗತಿಗೆ ಅಂಟಿಕೊಂಡರು. ಹೊರಗೆ ಬಂದ ಗುಂಪಿಗೆ ದಿಕ್ಕಾಪಾಲಾಗಿ, ವಿವಿಧ ದಾರಿಗಳ ಅನ್ವೇಷಣೆಯ ತವಕ. ಅಂತೂ ಇಂತು ನಾಲ್ಕಾರು ತಂಡಗಳಾಗಿ ಹಂಚಿ ಒಂದು ತಂಡ ಫಿಲ್ಮ್ ನೋಡಲು, ಇನ್ನೊಂದು ಗಣ ಗ್ರಂಥಾಲಯ ದರ್ಶನಕ್ಕೆಂದು, ಉಳಿದ ಗುಂಪುಗಳು ಫೋರಮ್‌ ಮಾಲ್‌ ಮತ್ತಿತರ ಕಡೆ ಧಾವಿಸಿದವು. ಎಲ್ಲರ ಚಿತ್ತ ಕ್ಲಾಸ್‌ ಬಂಕಿನತ್ತ ಎಂದಿದ್ದರೂ ಮನದಲ್ಲೇನೋ ತಳಮಳ! ಇನ್ನೊಂದು ಮಗ್ಗುಲಲ್ಲಿ ಭಂಡಧೈರ್ಯ, ಬಹುಶಃ ಇಷ್ಟೊಂದು ಪ್ರಮಾಣದಲ್ಲಿ ಇಷ್ಟು ಜನ ಬಂಕ್‌ ಹೊಡೆದಿರೋ ಕಾರಣ ಕ್ಲಾಸ್‌ ನಡೆಸಿರಲಿಕ್ಕಿಲ್ಲ ಎಂದು.

Advertisement

ಕ್ಲಾಸ್‌ ಬಂಕ್‌ ನಡೆಸುವ ಸದುದ್ದೇಶ ಹೊಂದಿದ ಸಹೃದಯರು ಅಲ್ಲಲ್ಲಿ ತಿರುಗಾಡಿದರೆ ಪ್ರಾಧ್ಯಾಪಕರ ಬೈಗಳು ಖಚಿತ. ಹಾಗಾಗಿ, ಅತ್ತಿತ್ತಗಲದಿ ಓಡಾಟ ನಡೆಸದೆ, ನಿತ್ಯ ರಗಳೆ ಬೇಡ ಎಂದಿದ್ದರೆ ಅತ್ಯಂತ ಉತ್ತಮ ಆಯ್ಕೆ ಎನಿಸಿಕೊಳ್ಳುತ್ತದೆ.

ಕ್ಲಾಸ್‌ ಬೋರ್‌ ಹೊಡೀತಿದೆ
ಕ್ಲಾಸ್‌ ಬಂಕ್‌ ನಡೆಸಿದವರಿಗೆ ನಿರ್ದಿಷ್ಟ ಕಾರಣಕ್ಕಾಗಿ ಬಂಕ್‌ ನಡೆಸಿದೆ ಎಂಬುವುದರ ಬಗ್ಗೆ ಸ್ಪಷ್ಟತೆ ಇರಬೇಕೆಂದಿಲ್ಲ. ಕೆಲವು ಸಲ ತರಗತಿಗೆ ಚಕ್ಕರ್‌ ಹೊಡೆಯಬೇಕೆಂದು ಅನ್ನಿಸೋದು ಏಕತಾನತೆಯ ಪಾಠಗಳಿಂದಲೋ ಅಥವಾ ಪಾಠದ ವಿಷಯ ಬಹಳ ಕ್ಲಿಷ್ಟವಾಗಿ, ರಸವೇ ಇಲ್ಲದಂತಾಗಿದ್ದರೆ ಮುಂತಾದ ಕಾರಣಗಳಿಂದ ಕ್ಲಾಸ್‌ ಬಂಕ್‌ ಹೊಡೆಯೋದು ಅನಿವಾರ್ಯ ಎನ್ನುವುದು ಸಹಜ. ಸುಮ್ಮನೆ ತರಗತಿಯಲ್ಲಿ ನಿದ್ದೆ ಹೊಡೆದು ಲೆಕ್ಚರರ್ಸ್‌ಗೆ ಬೇಜಾರು ಮಾಡೋ ಬದಲು, ಏನಾದರೊಂದು ನೆವನ ಹೇಳಿ ಗೈರಾಗೋದು ಬಂಕರ್ಸ್‌ ಸದಾಲೋಚನೆ.

ಕೆಲವು ಸಲ ಕೆಲವು ಲೆಕ್ಚರರ್ಸ್‌ “ನಾಳೆ ಪ್ರಶ್ನೆ ಕೇಳ್ತೀನಿ, ಓದೊRಂಡ್‌ ಬನ್ನಿ, ಉತ್ತರ ತಪ್ಪಾದರೆ ನೂರು ಸಲ ಬರಿಸ್ತೀನಿ’ ಅನ್ನುವ ಬೆದರಿಕೆಗೆ ಬಗ್ಗಿದ ಹಾಗೂ ಬಗ್ಗದ ವಿದ್ಯಾರ್ಥಿಗಳು ಬಂಕ್‌ ಮಾಡುವ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಾರೆ. ದುರದೃಷ್ಟವಶಾತ್‌ ಮರುದಿನ ಬಂಕ್‌ ಹೊಡೆದ ವಿದ್ಯಾರ್ಥಿಗಳಿಗೆ ನಿರಾಸೆ ಕಾದಿತ್ತು. ಕಾರಣ, ಆವತ್ತು ಯಾವ ಪ್ರಶ್ನೆಯೂ ಕೇಳದೆ , ಖಚkಛಿ ಛಟಡಿn ಠಿಜಛಿ nಟಠಿಛಿs ಎಂಬ ಉದ್ಗಾರ ಗುನುಗುನಿಸಿತ್ತು.

ಇನ್ನು ಕೆಲವು ಬಂಕ್‌ ಮಾಸ್ಟರ್ಸ್‌ಗಳಿಗೆ ಅಸೈನ್‌ಮೆಂಟ್‌ ಪೂರ್ಣವಾಗದ ಚಿಂತೆ. ಹೀಗಾಗಿ, ಅದಕ್ಕೊಂದು ಮುಕ್ತಿ ಕರುಣಿಸಲು ಹಪಹಪಿಸಿರುತ್ತಾರೆ.

Advertisement

ಗೈರಾಗುವ ಕೆಲವರಿಗೆ ಹೊಸದಾಗಿ ಬಿಡುಗಡೆಗೊಂಡ ಚಲನಚಿತ್ರ ಚಿತ್ತ ಸೂರೆಗೈದಿರುತ್ತದೆ. ಅದನ್ನು ವೀಕ್ಷಿಸುವ ತವಕ ಮೂರು ಗಂಟೆ ಕ್ಲಾಸ್‌ಗಳಿಗೆ ಟಾಟಾ ಹೇಳಿಬಿಟ್ಟಿರುತ್ತದೆ.

ಬಹುತೇಕ ವಿದ್ಯಾರ್ಥಿಗಳು ಕಾಲೇಜಿನ ಮೊದಲ ಅವಧಿ ತಪ್ಪಿಸಿಕೊಳ್ಳುತ್ತಾರೆ. ಸಂಚಾರದಟ್ಟಣೆಯೋ, ಉದಾಸೀನ ಪ್ರವೃತ್ತಿಯೋ, ಮನೆ ತಾಪತ್ರಯವೋ ! ಸೌಮ್ಯ ಸ್ವಭಾವದ ಕೆಲವು ಲೆಕ್ಚರರ್ಸ್‌ ತರಗತಿಗೆ ಸ್ವಾಗತಿಸಿದರೆ, ಸದಾ ಶಿಸ್ತು- ಕ್ರಮಶಿಕ್ಷಣದ ಮಂತ್ರ ಪಠಿಸುವ ಪ್ರಾಧ್ಯಾಪಕರ ಕಡೆಯಿಂದ “ನೋ ಎಂಟ್ರಿ’ ಹಲಗೆ.

ತರಗತಿಗೆ ಬಂಕ್‌ ಹೊಡಿಯೋ ಜೋಡಿಗಳಿಗೂ ಕಡಿಮೆ ಇಲ್ಲ ಬಿಡಿ. ಮನದನ್ನೆಯ ಮನದಿಂಗಿತ ಅರಿತವ ಮನದಲ್ಲಿ ಮಂಡಿಗೆ ತಿನ್ನದೆ, ಮಧುರವಾದ ನೆನಪಿಗಾಗಿ ಕ್ಲಾಸ್‌ಬಂಕ್‌ ಹೊಡೆಯದಿರನು. ಕಾಲೇಜಿಗೆ ಮೊಬೈಲ… ತರುವುದು ನಿಷಿದ್ಧವಾದರೂ, ತರಗತಿಯೊಳಗೆ ಕುಳಿತು “ನೆಕ್ಸ್ಟ್ ಅವರ್‌ ಬಂಕ್‌ ಮಾಡ್ತೀನಿ, ಐಡಿಯಲ್‌ನಲ್ಲಿ ಮೀಟ್‌ ಮಾಡು’ ಎಂದು ಸಂದೇಶ ರವಾನಿಸುವ ತರೆಲಗಳಿಗೂ ಕಮ್ಮಿ ಇಲ್ಲ.

ಸದಾಕಾಲ ಕ್ಲಾಸಿಗಿಲ್ಲ
ಮೇಲ್ಕಂಡ ಕ್ಲಾಸ್‌ ಬಂಕರ್ಸ್‌ಗಳು ಕೆಲವು ತರಗತಿ ಅಥವಾ ಕೆಲವು ಗಂಟೆ ಬಂಕ್‌ ಮಾಡಬಹುದಷ್ಟೆ. ಆದರೆ, ನಮ್ಮ ಈ “ಸದಾಕಾಲ ಕ್ಲಾಸಿಗಿಲ್ಲ’ ಎನ್ನುವ ಗುಂಪಿದೆಯಲ್ಲ , ಇವರ ಮಹಿಮೆ ಮಾತ್ರ ವರ್ಣನಾತೀತ.

ಇವರಲ್ಲಿ ಬಹುತೇಕರೂ ಯಾವುದಾದರೂ ಮಹತ್ತರ ಜವಾಬ್ದಾರಿ ಹೊತ್ತಿದ್ದವರೇ ಆಗಿರುತ್ತಾರೆ. ಕೆಲವರು ಕೆಲವು ಸಾಂಸ್ಕೃತಿಕ ಸಂಘ, ಕಾರ್ಯಕ್ರಮಗಳ, ಚಟುವಟಿಕೆಗಳ ಭಾರ ಹೊತ್ತಿದ್ದರಂತೂ ಕ್ಲಾಸಿಗೆ ಬರೋದು ಅತ್ತಿಯ ಹೂವಿನಂತಾಗಿರುತ್ತದೆ.

ಇನ್ನು ಕೆಲವರು ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡವರಾಗಿದ್ದರಂತೂ ಯಾವಾಗಲೂ ಕ್ರೀಡಾಕೂಟ ತಾಲೀಮು, ಪ್ರಾಕ್ಟೀಸ್‌ ಅಂತೆಲ್ಲ ತಿರುಗಾಟ ನಡೆಸೋದರಿಂದ ತರಗತಿಗೆ ಅಪೂರ್ವ ಎಂದೆನಿಸುತ್ತಾರೆ.

ಇವರೆಲ್ಲರಿಗಿಂತಲೂ ವಿಚಿತ್ರ ಎಂದೆನಿಸಿ, ಸಂಭಾವಿತರಾಗುವವರು ಮಾತ್ರ ನಮ್ಮ ಅಂತರ್‌ಕಾಲೇಜು ಮಟ್ಟದ ಸ್ಪರ್ಧಾಳುಗಳು. ಮುಂದಿನ ತಿಂಗಳು ನಡೆಯಬೇಕಾದ ಪಂಥಕ್ಕೆ ಈಗಲೇ ತಯಾರಿ ನಡೆಸುವ ವರ್ಗ. ಅದಕ್ಕೆಂತಲೇ ತಿಂಗಳಾನುಗಟ್ಟಲೆ ಕ್ಲಾಸ್‌ಗೆ ಚಕ್ಕರ್‌ ಹಾಕಿ, ಪ್ರಾಕ್ಟೀಸ್‌ ಅಂತ ಹೊರಗುಳಿಯುತ್ತಾರೆ. ಮತ್ತೆ ಅಪರೂಪಕ್ಕೊಮ್ಮೆ ತರಗತಿಗ ಹಠಾತ್ತನೆ ಧಾವಿಸಿದ್ದು ಕಂಡ ಲೆಕ್ಚರರ್‌ಗೆ ಖುಷಿ ಆದರೂ, “ಮ್ಯಾಮ್‌, ಬ್ಯಾಗ್‌ನೊಳಗೆ ಕ್ಯಾಸೆಟ್‌ ಇದೆ, ತಾ ಅಂತ ಹೇಳಿದ್ರು, ತಗೊಳ್ಳಾ?’ ಅಂತಂದಾಗ ಏರಿದ ನಗು ಹೊಗೆಯಾಗಿ ಇಳಿದಿತ್ತು.

ಹಾಜರಾತಿ ಕೊರತೆ ಉಂಟಾಗದಂತೆ ಎಚ್ಚರಿಕೆಯಿಂದ ಶೇ. 75% ಹಾಜರಿ ಲೆಕ್ಕಮಾಡಿಟ್ಟುಕೊಂಡು ಶೆಡ್ನೂಲ್‌ ಸಿದ್ಧಪಡಿಸುವ ತುಂಟರಿಗೂ ಕೊರತೆ ಇಲ್ಲ .

ಕೊನೆಯದಾಗಿ, ಕ್ಲಾಸ್‌ಬಂಕ್‌ ಎನ್ನುವುದು ಕಾಲೇಜು ಜೀವನದ ಒಂದು ಪ್ರಮುಖ ಅಂಗ ಎಂದರೆ ತಪ್ಪಿಲ್ಲ . ಕ್ಲಾಸಿನ ನಾಲ್ಕು ಗೋಡೆ ಮಧ್ಯೆ ಅದೆ ರಾಗ ಅದೇ ತಾಳದ ಪಾಠ ಪ್ರವಚನ ಕೇಳಿ ಜಡ್ಡುಗಟ್ಟಿದ ದೇಹಕ್ಕೆ ನವೋಲ್ಲಾಸ ಕೊಡೋ ಟಾನಿಕ್‌ ಈ ಕ್ಲಾಸ್‌ ಬಂಕ್‌, ಏನಂತೀರಿ!

– ಸುಭಾಸ್‌ ಮಂಚಿ
ನಿಕಟಪೂರ್ವ ಹಳೆ ವರ್ಷದ ವಿದ್ಯಾರ್ಥಿ 
ವಿಶ್ವವಿದ್ಯಾನಿಲಯ ಕಾಲೇಜು ಕುಡ್ಲ

Advertisement

Udayavani is now on Telegram. Click here to join our channel and stay updated with the latest news.

Next