Advertisement
ಹೌದು, ಬೆಂಗಳೂರಿನಾದ್ಯಂತ ಜಲ ಮಂಡಳಿ ಮತ್ತು ಬಿಬಿಎಂಪಿಯ ಒಟ್ಟಾರೆ 12,986 ಬೋರ್‌ವೆಲ್‌ಗಳು ಸುಸ್ಥಿತಿಯ ಲ್ಲಿದ್ದು ಈ ಪೈಕಿ 850ರಲ್ಲಿ ಮಾತ್ರ ಕುಡಿಯಲು ಯೋಗ್ಯವಾದ ನೀರು ಲಭ್ಯವಾಗುತ್ತಿದೆ. ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಮಂಡನೆ ಯಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಕೊಳವೆಬಾವಿ ಅವಲಂಬಿತ ಪ್ರದೇಶಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅನಿ ವಾರ್ಯತೆ ಎದುರಾಗಿದೆ.
Related Articles
Advertisement
ಫ್ಲೋರೈಡ್ ಅಂಶ ನಾಶಕ್ಕೆ ಕೆಮಿಕಲ್: ಫಲಕಗಳ ಅಳವಡಿಕೆ ಜತೆಗೆ ಫ್ಲೋರೈಡ್ ಅಂಶ ಕಂಡುಬಂದ ಕೊಳವೆಬಾವಿಗಳಿಗೆ ಸೋಡಿಯಂ ಹೈಪೋಕ್ಲೋರೈಟ್ ಸೇರಿಸುವ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚು ಕಡೆಗಳಲ್ಲಿ ಈ ಘಟಕಗಳನ್ನು ತೆರೆಯಲಾಗಿದೆ. ಈ ಅಂಶವನ್ನು ಸೇರ್ಪಡೆ ಮಾಡುವುದರಿಂದ ನೀರನ್ನು ಕುಡಿಯಲಿಕ್ಕೂ ಬಳಸಬಹುದಾಗಿದೆ. ಆದರೆ, ಸಿಬ್ಬಂದಿ ಕೊರತೆ ಇರುವುದರಿಂದ ಪ್ರತಿ ಬೋರ್‌ವೆಲ್‌ಗೆ ಇದು ಕಷ್ಟಸಾಧ್ಯ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್ (ಯೋಜನೆ) ಕೆ.ಆರ್. ಮಂಜುನಾಥ್ ತಿಳಿಸುತ್ತಾರೆ.
ಸಾಮಾನ್ಯವಾಗಿ ಬಡವರು ವಾಸವಿರುವ ಪ್ರದೇಶಗಳಲ್ಲಿ ಈ ಕೊಳವೆಬಾವಿಗಳಿವೆ. ಅಲ್ಲೆಲ್ಲಾ ಒಂದು ದಿನ ಕಾವೇರಿ ಮತ್ತೂಂದು ದಿನ ಕೊಳವೆಬಾವಿ ನೀರು ಪೂರೈಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ. ಅಲ್ಲದೆ, ಕೆಲವೆಡೆ ಶುದ್ಧಕುಡಿಯುವ ನೀರಿನ ಘಟಕಗಳಿರುವುದರಿಂದ ಇದು ಗಂಭೀರ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಫ್ಲೋರೈಡ್ ಇದ್ದಲ್ಲಿ ಟ್ಯಾಂಕರ್ ನೀರು: ಅದೇ ರೀತಿ, ಪಾಲಿಕೆಗೆ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕೊಳವೆಬಾವಿಗಳೊಂದೇ ನೀರಿನ ಮೂಲ. ಈ ಭಾಗಗಳಲ್ಲಿ ಗುರುತಿಸಲಾಗಿರುವ ಆಯ್ದ ಕೊಳವೆ ಬಾವಿಗಳಿಂದ ಕುಡಿಯುವ ಉದ್ದೇಶಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ. ಗುಣಮಟ್ಟ ಖಾತ್ರಿಪಡಿಸಿಕೊಂಡ ನಂತರವೇ ಜನರಿಗೆ ಒದಗಿಸಲಾಗುತ್ತಿದೆ. ಒಂದು ವೇಳೆ ಫ್ಲೋರೈಡ್‌ಯುಕ್ತ ನೀರು ಎಂಬುದು ಕಂಡುಬಂದರೆ, ತಕ್ಷಣ ಸ್ಥಗಿತಗೊಳಿಸಬೇಕು. ಅಂತಹ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲು ಸೂಚಿಸಲಾಗಿದೆ.
ಸದ್ಯಕ್ಕಂತೂ ಹೊರೆಯಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸಮಜಾಯಿಷಿ ನೀಡುತ್ತಾರೆ. ಈ ಮಧ್ಯೆ ಪಾಲಿಕೆ ಸದಸ್ಯರ ಬಳಿ ತಲಾ 40 ಲಕ್ಷ ಅನುದಾನ ಇದೆ. ಅನಿವಾರ್ಯತೆ ಇರುವ ಕಡೆ ಬೋರ್‌ವೆಲ್ ಕೊರೆಯಲಿಕ್ಕೂ ಸೂಚನೆ ನೀಡಲಾಗಿದೆ. ಇದಲ್ಲದೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನೂ ನಿರ್ಮಿಸಲಾಗಿದೆ. ಈ ಮೂಲಕ ಹೊರೆ ಯನ್ನು ನಿಭಾಯಿಸಲಾಗುತ್ತಿದೆ ಎಂದು ಅವರು ತಿಳಿಸುತ್ತಾರೆ.
ಹೊರೆ ಆಗದು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ವರದಿಯಲ್ಲಿ ಎಲ್ಲ ಕೊಳವೆಬಾವಿಗಳೂ ಫ್ಲೋರೈಡ್‌ನಿಂದ ಕೂಡಿವೆ ಎಂದು ಹೇಳಿಲ್ಲ. ಕೆಲ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಹೇಳಿದೆ. ಹಾಗಾಗಿ, ಉಳಿದ ಉದ್ದೇಶಗಳಿಗೆ ಈ ನೀರನ್ನು ಬಳಸಬಹುದಾಗಿದೆ. ಇನ್ನು ಕುಡಿಯಲಿಕ್ಕೆ ಕಾವೇರಿ ನೀರು ಒದಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಹೊರೆಯಾಗುವುದಿಲ್ಲ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ವಿಶ್ವಾಸ ವ್ಯಕ್ತಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ