ಸುಳ್ಯ: ಗಡಿ ಭಾಗದ ಕನ್ನಡ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಮತ್ತು ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಪ್ರಾಧಿಕಾರ ಒತ್ತು ನೀಡುತ್ತಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸೋಮಶೇಖರ್ ಹೇಳಿದರು.
ಅವರು ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು. ನೂತನ ಕಟ್ಟಡವನ್ನು ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು.
ಸಚಿವ ಎಸ್. ಅಂಗಾರ ಅಧ್ಯಕ್ಷತೆ ವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಎ.ಒ.ಎಲ್.ಇ.ಅಧ್ಯಕ್ಷ ಡಾ| ಕೆ.ವಿ.ಚಿದಾನಂದ, ಶಿಕ್ಷಣ ತಜ್ಞ ರಾಧಾಕೃಷ್ಣ ಕೆ.ಇ., ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ್, ಎಂ.ಆರ್.ಪಿ.ಎಲ್..ಜನರಲ್ ಮ್ಯಾನೇಜರ್ ಕಿರಣ್ ಬಿ., ಮಂಗಳೂರು ಎಂ.ಸಿಎಫ್. ಡಿಜಿಎಂ ಕೀರ್ತನ್ ಕುಮಾರ್, ಕರ್ಣಾಟಕ ಬ್ಯಾಂಕ್ ಜನರಲ್ ಮೆನೇಜರ್ ಬಿ.ಎಸ್.ರಾಜ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇಲಾಖೆಯ ಪ್ರಕಾಶ್ ಮತ್ತಿಹಳ್ಳಿ, ಯೋಜನೆಯ ಮೇಲ್ವಿಚಾರಕ ಸುಧೀರ್ ಕುಮಾರ್, ರಾಮಕೃಷ್ಣ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷೆ ವೇದಾವತಿ ಅನಂತ, ಗ್ರಾ.ಪಂ.ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸದಸ್ಯ ಸತ್ಯಕುಮಾರ್ ಅಡಿಂಜ, ನಿವೃತ್ತ ಮುಖ್ಯ ಶಿಕ್ಷಕ ವಾಸಪ್ಪ ಗೌಡ, ನಿವೃತ್ತ ಶಿಕ್ಷಕಿ ಇಂದಿರಾ ದೇವಿ ಉಪಸ್ಥಿತರಿದ್ದರು.
ರಾಮಕೃಷ್ಣ ವಿದ್ಯಾಸಂಘದ ಅಧ್ಯಕ್ಷೆ ಡಾ| ಸಾಯಿಗೀತಾ ಸ್ವಾಗತಿಸಿದರು. ಸಂಚಾಲಕ ಡಾ| ಎನ್.ಎ.ಜ್ಞಾನೇಶ್ ಪ್ರಸ್ತಾವನೆಗೈದರು. ಕೋಶಾಧಿಕಾರಿ ಡಾ| ಜಯದೀಪ್ ಎನ್ .ಎ.ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ನಿರೂಪಿಸಿದರು.