ನವದೆಹಲಿ: ಭಾರತೀಯ ನೌಕಾಪಡೆಗೆ ಸದ್ಯದಲ್ಲೇ ಕ್ಷಿಪಣಿ ವಿಧ್ವಂಸಕ ವ್ಯವಸ್ಥೆ ಹಾಗೂ ಕಲವರಿ ಮಾದರಿಯ ಒಂದು ಜಲಾಂತರ್ಗಾಮಿ ಸೇರ್ಪಡೆಯಾಗಲಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾವು ತನ್ನ ಹಿಡಿತವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದನ್ನು ಭಾರತ ತಡೆಯಲು ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಇವೆರಡರ ಸೇರ್ಪಡೆಯಿಂದ ನೌಕಾಪಡೆಗೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ ನೌಕಾಪಡೆಯ ಉಪ ಅಡ್ಮಿರಲ್ ಸತೀಶ್ ನಾಮದೇವ್ ಘೋರ್ಮಡೆ, “ವಿಶಾಖಪಟ್ಟಣಂ ಎಂಬ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ನ. 21ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ವೇಲಾ ಜಲಾಂತರ್ಗಾಮಿಯನ್ನು ನ. 25ರಂದು ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಕರಮ್‌ಬೀರ್ ಸಿಂಗ್ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:ಜ.30 ರೊಳಗೆ ದೇವಸ್ಥಾನಗಳ ಆಡಿಟ್ ರಿಪೋರ್ಟ್ ಸಲ್ಲಿಸಿ : ಸಚಿವೆ ಶಶಿಕಲಾ ಜೊಲ್ಲೆ ತಾಕೀತು
ಭಾರತದ ನಾನಾ ಹಡಗು ನಿರ್ಮಾಣ ಘಟಕಗಳಲ್ಲಿ ಒಟ್ಟಾರೆ 39 ಯುದ್ಧ ಹಡಗುಗಳನ್ನು ಹಾಗೂ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ. ಇವೆಲ್ಲವೂ ನೌಕಾಪಡೆಗೆ ಸೇರ್ಪಡೆಯಾದ ಮೇಲೆ ನಮ್ಮ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.